ಜನಪ್ರಿಯ ಯೂಟ್ಯೂಬರ್ ಮತ್ತು ಬಿಗ್ ಬಾಸ್ OTT 2 ವಿಜೇತ ಎಲ್ವಿಶ್ ಯಾದವ್ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ಪತಿ, ರಾಜಕಾರಣಿ ಫಹಾದ್ ಅಹ್ಮದ್ ಮಹಾರಾಷ್ಟ್ರ ಚುನಾವಣೆಯಲ್ಲಿನ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದು ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ 225ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಮತಗಳ ಎಣಿಕೆಯ ಮಧ್ಯೆ, ಸ್ವರಾ ಮತ್ತು ಅವರ ಪತಿ ಫಹಾದ್ ಅವರು ಮಹಾರಾಷ್ಟ್ರದ ಅನುಶಕ್ತಿ ನಗರದಲ್ಲಿ ಇವಿಎಂಗಳನ್ನು ದೂಷಿಸಿದ್ದಾರೆ.
ಇಂದು ಮುಂಜಾನೆ, ಫಹಾದ್ ಅವರು 16, 17, 18, ಮತ್ತು 19 ಸುತ್ತುಗಳ ಮತಗಳ ಮರು ಎಣಿಕೆ ಮತ್ತು ಭಾರತದ ಚುನಾವಣಾ ಆಯೋಗದಿಂದ ತನಿಖೆಗೆ ಒತ್ತಾಯಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಶೇಕಡ 99ರಷ್ಟು ಚಾರ್ಜ್ ಮಾಡಲಾದ ಇವಿಎಂ ಯಂತ್ರಗಳು ತಮ್ಮ ಪ್ರತಿಸ್ಪರ್ಧಿ ನವಾಬ್ ಮಲಿಕ್ ಅವರ ಪುತ್ರಿ ಸನಾ ಮಲಿಕ್ ಅವರಿಗೆ ಡಬಲ್/ಟ್ರಿಪಲ್ ಮತಗಳನ್ನು ನೀಡಿವೆ ಎಂದು ಫಹಾದ್ ಆರೋಪಿಸಿ ಟ್ವೀಟ್ ಮಾಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ಎಲ್ವಿಶ್, ನಿಮ್ಮ ಪತ್ನಿ ಸ್ವರಾ ಭಾಸ್ಕರ್ ಗೆ ಹಿಜಾಬ್ ಹಾಕಿಸದಿದ್ದಕ್ಕೆ ನಿಮಗೆ ಸೋಲಿನ ಶಿಕ್ಷೆಯಾಗಿದೆ ಎಂದು ಬರೆದಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಅರ್ಧ ಚಂದ್ರನ ಎಮೋಟಿಕಾನ್ ಅನ್ನು ಕೂಡ ಸೇರಿಸಿದ್ದಾರೆ.
ಮತ್ತೊಂದೆಡೆ ತಮ್ಮ ಪತಿ ಫಹಾದ್ ಸೋಲಿಗೆ ಇವಿಯಂ ಯಂತ್ರಗಳನ್ನು ದೂಷಿಸಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದನ್ನು ಚುನಾವಣಾ ಆಯೋಗ ಮತ್ತು ಮಹಾ ವಿಕಾಸ್ ಅಘಾಡಿಯ ನಾಯಕರ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ 'ಇಡೀ ದಿನ ಮತ ಚಲಾಯಿಸಿದ ಯಂತ್ರಗಳು 99% ಚಾರ್ಜ್ ಮಾಡಿದ ಬ್ಯಾಟರಿಗಳನ್ನು ಹೊಂದುವುದು ಹೇಗೆ? ಎಲ್ಲಾ 99% ಚಾರ್ಜ್ ಆಗಿರುವ ಎಲ್ಲಾ ಬ್ಯಾಟರಿಗಳು ಬಿಜೆಪಿಗೆ ಮತ್ತು ಅದರ ಮಿತ್ರರಿಗೆ ಹೇಗೆ ಮತ ನೀಡುತ್ತವೆ? ಎಂದು ಪ್ರಶ್ನಿಸಿದ್ದಾರೆ.
Advertisement