ನವದೆಹಲಿ: ಸಂವಿಧಾನ ದಿನದ ಪಾದಯಾತ್ರೆ; ಮನ್ಸುಖ್ ಮಾಂಡವೀಯಾ, 10,000 ಕ್ಕೂ ಹೆಚ್ಚು ಮಂದಿ ಭಾಗಿ

ಯುವಜನರಲ್ಲಿ ಸಾಂವಿಧಾನಿಕ ಮೌಲ್ಯಗಳ ಅರಿವನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿತ್ತು.
Mansukh Mandaviya
ಪಾದಯಾತ್ರೆಯಲ್ಲಿ ಮನ್ಸುಖ್ ಮಾಂಡವೀಯಾ
Updated on

ನವದೆಹಲಿ: ರಾಷ್ಟ್ರೀಯ ಸಂವಿಧಾನ ದಿನವನ್ನು ಆಚರಿಸಲು ಮತ್ತು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವವನ್ನು ಗೌರವಿಸಲು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಬೆಳಿಗ್ಗೆ 'ನನ್ನ ಸಂವಿಧಾನ, ನನ್ನ ಸ್ವಾಭಿಮಾನ' ಪಾದಯಾತ್ರೆಗೆ ಚಾಲನೆ ನೀಡಿದರು. 1949ರಲ್ಲಿ ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ದಿನವಾದ ನವೆಂಬರ್ 26ನ್ನು ಪ್ರತಿವರ್ಷ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ.

ಯುವ ವ್ಯವಹಾರಗಳ ಇಲಾಖೆಯು ಆಯೋಜಿಸಿದ್ದ ಈ ಕಾರ್ಯಕ್ರಮವು ದೇಶದ ಯುವಜನರಲ್ಲಿ ಸಾಂವಿಧಾನಿಕ ಮೌಲ್ಯಗಳ ಅರಿವನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿತ್ತು. ಬೆಳಗ್ಗೆ 8 ಗಂಟೆಗೆ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಿಂದ ಆರಂಭವಾದ ಮೆರವಣಿಗೆ ಇಂಡಿಯಾ ಗೇಟ್ ಸರ್ಕಲ್ ನಲ್ಲಿ 9:30 ಕ್ಕೆ ಮುಕ್ತಾಯವಾಯಿತು. ಇದರಲ್ಲಿ ಕೇಂದ್ರ ಸಚಿವರು, ಕ್ರೀಡಾಪಟುಗಳು ಸೇರಿದಂತೆ 10,000 ಕ್ಕೂ ಹೆಚ್ಚು ಯುವ ಸ್ವಯಂಸೇವಕರ ಭಾಗವಹಿಸಿದ್ದರು.

ಕೇಂದ್ರ ಸಚಿವರಾದ ಕಿರಣ್ ರಿಜಿಜು, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಪ್ರಮುಖ ನಾಯಕರು, ಖ್ಯಾತ ಕುಸ್ತಿಪಟು ಮತ್ತು ಬಿಜೆಪಿ ನಾಯಕ ಯೋಗೇಶ್ವರ್ ದತ್, ಭಾರತೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಚಾನು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

Mansukh Mandaviya
'ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ, ಸಂವಿಧಾನ ದಿನ ಪಕ್ಷದ ಕಾರ್ಯಕ್ರಮವಲ್ಲ': ಪ್ರಧಾನಿ ನರೇಂದ್ರ ಮೋದಿ

ಮಾಂಡವೀಯ ಅವರು ಯುವಕರ ಉತ್ಸಾಹವನ್ನು ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ‘ವಿಕಸಿತ ಭಾರತ ಕಡೆಗೆ ಮುನ್ನಡೆಯುತ್ತಿದೆ. 2047 ರ ವೇಳೆಗೆ ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಿವಾಗ ನಾವು ಈ ದೂರದೃಷ್ಟಿಯನ್ನು ಸಾಧಿಸುತ್ತೇವೆ ಎಂದರು.ಇದೇ ವೇಳೆ ಡಾ.ಬಿ. ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಕೊಡುಗೆಗಳನ್ನು ಪ್ರದರ್ಶಿಸುವ ಕಲಾ ಪ್ರದರ್ಶನ ಗಮನ ಸೆಳೆಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com