ತಮಿಳು ನಾಡಿನ ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ: 1,200 ನಿವಾಸಿಗಳ ಸ್ಥಳಾಂತರ

ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಜನರನ್ನು ಸ್ಥಳಾಂತರ ಮಾಡಲಾಗಿದ್ದರೆ, ತಗ್ಗು ಮತ್ತು ದುರ್ಬಲ ಪ್ರದೇಶಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಇತರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
A large two-storeyed vacant house which is said to be about 150 years old collapsed partially in the heavy rain in Palur of Sembanarkoil block on Tuesday night.
ಸೆಂಬನಾರ್‌ಕೋಯಿಲ್‌ ಬ್ಲಾಕ್‌ನ ಪಾಲೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಸುಮಾರು 150 ವರ್ಷಗಳಷ್ಟು ಹಳೆಯದಾದ ಎರಡು ಅಂತಸ್ತಿನ ಖಾಲಿ ಮನೆ ಭಾಗಶಃ ಕುಸಿದಿದೆ.
Updated on

ನಾಗಪಟ್ಟಿಣಂ(ತಮಿಳು ನಾಡು): ಫೆಂಗಲ್ ಚಂಡಮಾರುತದ ಪ್ರಭಾವದಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸತತ ಎರಡನೇ ದಿನವೂ ತಮಿಳು ನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕರಾವಳಿಯ ತಗ್ಗು ಮತ್ತು ದುರ್ಬಲ ಪ್ರದೇಶಗಳಲ್ಲಿ ವಾಸಿಸುವ 1,200 ಕ್ಕೂ ಹೆಚ್ಚು ಜನರನ್ನು ಆಶ್ರಯ ಮತ್ತು ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ನಾಗಪಟ್ಟಣಂನಲ್ಲಿ, ಜಿಲ್ಲೆಯ 12 ಶಿಬಿರಗಳಲ್ಲಿ 371 ಕುಟುಂಬಗಳ 1,032 ಜನರಿಗೆ ವಸತಿ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಜನರನ್ನು ಸ್ಥಳಾಂತರ ಮಾಡಲಾಗಿದ್ದರೆ, ತಗ್ಗು ಮತ್ತು ದುರ್ಬಲ ಪ್ರದೇಶಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಇತರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಜಿಲ್ಲಾಡಳಿತದ ಪ್ರಕಾರ, ನಾಗಪಟ್ಟಿನಂನ ಸೂರ್ಯ ನಗರದಲ್ಲಿ ವಾಸಿಸುವ 45 ಕುಟುಂಬಗಳ ಸುಮಾರು 110 ಜನರನ್ನು ಶಾಲೆಗೆ ಸ್ಥಳಾಂತರಿಸಲಾಗಿದೆ.

ಪೆರಿಯನಾರಿಯಕಾಡುವಿನ 67 ಕುಟುಂಬಗಳ ಒಟ್ಟು 231 ಜನರನ್ನು ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ, ಪಾಪಕೋವಿಲ್‌ನ 72 ಕುಟುಂಬಗಳ 180 ಜನರನ್ನು ಶಿಬಿರಕ್ಕೆ ಮತ್ತು ಪರಂಗಿನಾಳೂರಿನ 40 ಕುಟುಂಬಗಳ 120 ಜನರಿಗೆ ಖಾಸಗಿ ಸಭಾಂಗಣದಲ್ಲಿ ವಸತಿ ಕಲ್ಪಿಸಲಾಗಿದೆ.

A large two-storeyed vacant house which is said to be about 150 years old collapsed partially in the heavy rain in Palur of Sembanarkoil block on Tuesday night.
'ಫೆಂಗಲ್' ಚಂಡಮಾರುತ: ತಮಿಳು ನಾಡಿನಲ್ಲಿ ಇಂದಿನಿಂದ ಭಾರೀ ಮಳೆ ಸಾಧ್ಯತೆ

ವೇದಾರಣ್ಯಂ ಬ್ಲಾಕ್‌ನಲ್ಲಿ, 13 ಕುಟುಂಬಗಳ ಸುಮಾರು 30 ಜನರಿಗೆ ಅಗಸ್ತಿಯಂಪಲ್ಲಿಯ ವಿವಿಧೋದ್ದೇಶ ಆಶ್ರಯದಲ್ಲಿ ಮತ್ತು 80 ಆದಿ ದ್ರಾವಿಡರ್ ಕಲ್ಯಾಣ ಮಹಿಳಾ ಹಾಸ್ಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದೆ.

ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ, ಮಕ್ಕಳ ಕಲ್ಯಾಣ ಮತ್ತು ವಿಶೇಷ ಸೇವೆಗಳ ನಿರ್ದೇಶಕ ಜಾನಿ ಟಾಮ್ ವರ್ಗೀಸ್ ಮತ್ತು ನಾಗಪಟ್ಟಣಂ ಜಿಲ್ಲಾಧಿಕಾರಿ ಪಿ ಆಕಾಶ್ ಅವರು ಪರಿಹಾರ ಶಿಬಿರಗಳನ್ನು ಮತ್ತು ಅಲ್ಲಿ ನೀಡಲಾದ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಸಾಮಾನ್ಯ ಅಡುಗೆಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆಕಾಶ್ ತಿಳಿಸಿದ್ದಾರೆ.

ಎರಡು ದಿನದಲ್ಲಿ ಕರಾವಳಿಜಿಲ್ಲೆಗಳಲ್ಲಿ 150 ಮನೆಗಳಿಗೆ ನಾಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com