ನವದೆಹಲಿ: ಇಂದು ನವದೆಹಲಿಯಲ್ಲಿ ನಡೆದ ಎಐಸಿಸಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷ ಬಲವರ್ಧನೆಗೆ ಕಠಿಣ ನಿರ್ಧಾರಗಳು ಅಗತ್ಯ ಎಂದು ಹೇಳಿದ್ದಾರೆ.
ತಳಮಟ್ಟದಿಂದ ಪಕ್ಷ ಬಲವರ್ಧನೆಯಾಗಬೇಕು, ಉತ್ತರದಾಯಿತ್ವ ಇರಬೇಕು ಎಂದು ಹೇಳಿರುವ ಖರ್ಗೆ ಒಗ್ಗಟ್ಟಿನಿಂದ ಇರುವಂತೆ, ಒಬ್ಬರ ವಿರುದ್ಧ ಮತ್ತೊಬ್ಬರು ಮಾತನಾಡದಂತೆ ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದ್ದಾರೆ.
ಇವಿಎಂಗಳ ಬಗ್ಗೆಯೂ ಮಾತನಾಡಿರುವ ಖರ್ಗೆ, ಇವಿಎಂಗಳು ಚುನಾವಣಾ ಪ್ರಕ್ರಿಯೆಗಳ ಮೇಲೆ ಸಂದೇಹ ಮೂಡಿಸಿದೆ, ದೇಶದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸುವ ಹೊಣೆಗಾರಿಗೆ ಚುನಾವಣಾ ಆಯೋಗದ ಮೇಲೆ ಇದೆ ಎಂದು ಹೇಳಿದ್ದಾರೆ.
ಪಕ್ಷದಲ್ಲಿನ ಆಂತರಿಕ ಕಚ್ಚಾಟದ ಬಗ್ಗೆಯೂ ಖರ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಖರ್ಗೆ, ಒಗ್ಗಟ್ಟಿನ ಕೊರತೆ ಮತ್ತು ಸ್ವಂತ ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳು ಪಕ್ಷಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ ಎಂದು ಪ್ರತಿಪಾದಿಸಿದರು.
ನಾವು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಹೋರಾಡದಿದ್ದರೆ ಮತ್ತು ಪರಸ್ಪರರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ, ನಾವು ನಮ್ಮ ವಿರೋಧಿಗಳನ್ನು ರಾಜಕೀಯವಾಗಿ ಹೇಗೆ ಸೋಲಿಸಲು ಸಾಧ್ಯವಾಗುತ್ತದೆ? ”ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದ್ದಾರೆ.
ಚುನಾವಣಾ ಫಲಿತಾಂಶಗಳಿಂದ ಪಾಠ ಕಲಿಯುವ ಮೂಲಕ ಪಕ್ಷದಲ್ಲಿನ ನ್ಯೂನತೆಗಳನ್ನು ಹೋಗಲಾಡಿಸಲು ಕರೆ ನೀಡಿದ ಖರ್ಗೆ, ಪ್ರತಿಸ್ಪರ್ಧಿಗಳಿಂದ "ಅಪ್ರಚಾರ ಮತ್ತು ತಪ್ಪು ಮಾಹಿತಿ" ಯನ್ನು ಪರಿಣಾಮಕಾರಿಯಾಗಿ ಎದುರಿಸಲು ಪಕ್ಷವು ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ ಎಂದು ಹೇಳಿದ್ದಾರೆ.
Advertisement