ಮಹಾ ಚುನಾವಣೆ: ಇವಿಎಂ ಮತಗಳಲ್ಲಿ ವ್ಯತ್ಯಾಸ ಇದೆ, ಆದರೆ ತಿರುಚಿದ ಬಗ್ಗೆ ಪುರಾವೆ ಇಲ್ಲ - ಶರದ್ ಪವಾರ್

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕಾರ್ಯಕರ್ತ ಡಾ.ಬಾಬಾ ಅಧವ್ ಅವರನ್ನು ಭೇಟಿ ಮಾಡಿದ ಬಳಿಕ ಶರದ್ ಪವಾರ್ ಅವರು ಈ ಹೇಳಿಕೆ ನೀಡಿದ್ದಾರೆ
Sharad Pawar
ಶರದ್ ಪವಾರ್TNIE
Updated on

ಮುಂಬೈ: ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಇಡೀ ಚುನಾವಣಾ ಕಾರ್ಯವಿಧಾನವನ್ನು ನಿಯಂತ್ರಿಸಲು ಅಧಿಕಾರ ಮತ್ತು ಹಣದ ದುರುಪಯೋಗವಾಗಿದೆ ಎಂದು ಶನಿವಾರ ಪ್ರತಿಪಾದಿಸಿದ ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರು, ಹಿಂದೆಂದೂ ನಡೆಯದಂತಹ ಅಕ್ರಮಗಳಿಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕಾರ್ಯಕರ್ತ ಡಾ.ಬಾಬಾ ಅಧವ್ ಅವರನ್ನು ಭೇಟಿ ಮಾಡಿದ ಬಳಿಕ ಶರದ್ ಪವಾರ್ ಅವರು ಈ ಹೇಳಿಕೆ ನೀಡಿದ್ದಾರೆ.

90 ವರ್ಷದ ಡಾ.ಬಾಬಾ ಅಧವ್ ಅವರು ಗುರುವಾರ ನಗರದ ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ ನಿವಾಸವಾದ ಫುಲೆ ವಾಡಾದಲ್ಲಿ ತಮ್ಮ ಮೂರು ದಿನಗಳ ಪ್ರತಿಭಟನೆಯನ್ನು ಆರಂಭಿಸಿದರು.

Sharad Pawar
ನಮಗೆ ಇವಿಎಂ ಬೇಡ: ಮಹಾರಾಷ್ಟ್ರ ಹೀನಾಯ ಸೋಲಿನ ಬೆನ್ನಲ್ಲೇ ಬ್ಯಾಲೆಟ್ ಪೇಪರ್‌ಗೆ ಪಟ್ಟು ಹಿಡಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ(ಎಂವಿಎ) ಮಿತ್ರಪಕ್ಷಗಳಾದ ಕಾಂಗ್ರೆಸ್, ಶಿವಸೇನೆ-ಯುಬಿಟಿ ಮತ್ತು ಎನ್‌ಸಿಪಿ-ಎಸ್‌ಪಿ ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸುತ್ತಿವೆ.

ನವೆಂಬರ್ 20 ರಂದು ನಡೆದ ಚುನಾವಣೆಯಲ್ಲಿ ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಒಳಗೊಂಡ ಮಹಾಯುತಿ 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದರೆ, ಎಂವಿಎ ಕೇವಲ 46 ಸ್ಥಾನಗಳನ್ನು ಗಳಿಸಿದೆ.

ಅಧವ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ಇವಿಎಂಗಳಿಗೆ ಅಕ್ರಮವಾಗಿ ಮತಗಳನ್ನು ಸೇರಿಸಿರುವ ಬಗ್ಗೆ ಕೆಲವು ನಾಯಕರು ಹೇಳುತ್ತಿರುವ ಹೇಳಿಕೆಗಳಲ್ಲಿ ಸ್ವಲ್ಪ ಸತ್ಯವಿದೆ. ಆದರೆ ಅದಕ್ಕೆ ತಮ್ಮ ಬಳಿ ಪುರಾವೆಗಳಿಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಿಂದೆಂದೂ ಕಂಡರಿಯದ ‘ಅಧಿಕಾರ ದುರುಪಯೋಗ’ ಹಾಗೂ ‘ಹಣದ ಮಹಾಪೂರ’ ಕಂಡು ಬಂದಿದೆ ಎಂಬ ಗುಸುಗುಸು ಜನರಲ್ಲಿದೆ. ಹಣ ಮತ್ತು ಅಧಿಕಾರದ ದುರುಪಯೋಗದ ಸಹಾಯದಿಂದ ಇಡೀ ಚುನಾವಣಾ ಕಾರ್ಯವಿಧಾನವನ್ನು ನಿಯಂತ್ರಿಸಲಾಗಿದೆ. ಈ ರೀತಿ ಹಿಂದೆಂದೂ ಆಗಿರಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ನಾವು ಅದನ್ನು ನೋಡಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com