
ನವದೆಹಲಿ: ಹರಿಯಾಣ ವಿಧಾನಸಭೆಗೆ ನಡೆದ ಮತದಾನ ಶನಿವಾರ ಸಂಜೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ.
ಹರಿಯಾಣದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಆದರೆ ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದ್ದು, ಅಂತಿಮ ಫಲಿತಾಂಶ ಗೊತ್ತಾಗಲಿದೆ.
ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿರುವ ಬಿಜೆಪಿಗೆ ಈ ವಿಧಾನಸಭಾ ಚುನಾವಣೆಗಳು ನಿರ್ಣಾಯಕವಾಗಿವೆ.
ಹರಿಯಾಣದಲ್ಲಿ ಕಾಂಗ್ರೆಸ್ ಕಮಾಲ್ ಮಾಡಲಿದ್ದು, 55 ಸ್ಥಾನಗಳನ್ನು ಪಡೆಯಲಿದೆ ಮತ್ತು ಬಿಜೆಪಿಗೆ 26 ಸ್ಥಾನ ಹಾಗೂ ಜೆಜೆಪಿ 0-1 ಸ್ಥಾನ, ಐಎನ್‌ಎಲ್‌ಡಿ 2-3 ಮತ್ತು ಇತರರು 3-5 ಸ್ಥಾನಗಳನ್ನು ಪಡೆಯಬಹುದು ಎಂದು ಪೀಪಲ್ಸ್ ಪಲ್ಸ್ ಭವಿಷ್ಯ ನುಡಿದಿದೆ.
ಇತರ ಚುನಾವಣೋತ್ತರ ಸಮೀಕ್ಷೆಗಳು
ದೈನಿಕ್ ಭಾಸ್ಕರ್:
ಕಾಂಗ್ರೆಸ್ 44-54
ಬಿಜೆಪಿ 19-29
ಜೆಜೆಪಿ 0-1
ಐಎನ್‌ಎಲ್‌ಡಿ 1-5
ಇತರರು 4-9
ಧ್ರುವ್ ಸಮೀಕ್ಷೆ:
ಕಾಂಗ್ರೆಸ್ 57-64
ಬಿಜೆಪಿ 27-32
ಇತರರು 5-8
ರಿಪಬ್ಲಿಕ್-ಮ್ಯಾಟ್ರಿಜ್
ಕಾಂಗ್ರೆಸ್ 55-62
ಬಿಜೆಪಿ 18-24
ಜೆಜೆಪಿ 0-3
INLD 3-6
ಇತರೆ 2-5
ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆಗಳು
ಪೀಪಲ್ಸ್ ಪಲ್ಸ್ ಭವಿಷ್ಯ
ಕಾಂಗ್ರೆಸ್ 13-15
JKNC 33-35
ಬಿಜೆಪಿ 23-27
ಪಿಡಿಪಿ 7-11
ಇತರರು 4-5
Advertisement