ಥಾಣೆ ರಿಂಗ್ ಮೆಟ್ರೋ ಯೋಜನೆಗೆ ಶಂಕುಸ್ಥಾಪನೆ, ಮುಂಬೈ ಮೆಟ್ರೋ ಲೈನ್ 3 ಉದ್ಘಾಟಿಸಿದ ಪ್ರಧಾನಿ ಮೋದಿ
ಥಾಣೆ: ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲು ಯೋಜನೆ ಮತ್ತು ಎಲಿವೇಟೆಡ್ ಈಸ್ಟರ್ನ್ ಫ್ರೀವೇ ವಿಸ್ತರಣೆ ಸೇರಿದಂತೆ 32,800 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಇಂದು ಥಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನವಿ ಮುಂಬೈ ವಿಮಾನ ನಿಲ್ದಾಣ ಪ್ರಭಾವಿತ ಅಧಿಸೂಚಿತ ಪ್ರದೇಶ(NAINA) ಯೋಜನೆಗೂ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದರು.
ಇದೇ ವೇಳೆ 14,120 ಕೋಟಿ ರೂಪಾಯಿ ವೆಚ್ಚದ ಮುಂಬೈ ಮೆಟ್ರೋ ಲೈನ್ 3 ರ BKC ಯಿಂದ ಆರೆ JVLR ವಿಭಾಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ವಿಭಾಗವು 10 ನಿಲ್ದಾಣಗಳನ್ನು ಹೊಂದಿದ್ದು, ಅದರಲ್ಲಿ 9 ಸುರಂಗ ನಿಲ್ದಾಣಗಳಾಗಿವೆ.
ಮುಂಬೈ ಮೆಟ್ರೋ ಲೈನ್ - 3 ಮುಂಬೈ ನಗರ ಮತ್ತು ಉಪನಗರಗಳ ನಡುವಿನ ಪ್ರಯಾಣವನ್ನು ಸುಧಾರಿಸಲು ಪ್ರಮುಖ ಸಾರ್ವಜನಿಕ ಸಾರಿಗೆ ಯೋಜನೆಯಾಗಿದೆ. ಸಂಪೂರ್ಣ ಕಾರ್ಯಾಚರಣೆ ಆರಂಭವಾದ ನಂತರ ಮಾರ್ಗ-3ಯಲ್ಲಿ ಪ್ರತಿದಿನ ಸುಮಾರು 12 ಲಕ್ಷ ಪ್ರಯಾಣಿಕರ ಸಂಚರಿಸುವ ನಿರೀಕ್ಷೆಯಿದೆ.
ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲು ಯೋಜನೆಯನ್ನು ಸುಮಾರು 12,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಒಟ್ಟು ಉದ್ದ 29 ಕಿ.ಮೀ. ಉದ್ದದ ಈ ಮಾರ್ಗ 20 ಎತ್ತರಿಸಿದ ಮತ್ತು 2 ಸುರಂಗ ನಿಲ್ದಾಣಗಳನ್ನು ಹೊಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ