ನವದೆಹಲಿ: ಜಾಗತಿಕ ಮಟ್ಟದ ನಿಲ್ದಾಣವಾಗಿ ಅಭಿವೃದ್ಧಿಗೊಂಡಿರುವ ನವದೆಹಲಿ ರೈಲ್ವೆ ನಿಲ್ದಾಣ, ವಾರ್ಷಿಕ ಆದಾಯ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದೆ.
2023-24 ನೇ ಸಾಲಿನ ದೇಶದ 100 ಉತ್ತಮ ಆದಾಯ ಗಳಿಕೆ ಹಾಗೂ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳ ಪಟ್ಟಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದ್ದು, ಅಗ್ರಸ್ಥಾನವನ್ನು ನವದೆಹಲಿ ಉಳಿಸಿಕೊಂಡಿದೆ.
ದೆಹಲಿಯ ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಹೌರಾ ನಿಲ್ದಾಣ ಇದ್ದು, 3 ನೇ ಸ್ಥಾನದಲ್ಲಿ ಚೆನ್ನೈ ಎಂಜಿಆರ್ ಸೆಂಟ್ರಲ್ ಇದೆ. ಟಾಪ್ 100ರಲ್ಲಿ ಈ ಮೂರು ರೈಲು ನಿಲ್ದಾಣಗಳು ವಾರ್ಷಿಕ ಗಳಿಕೆ ಮತ್ತು ಪ್ರಯಾಣಿಕರ ಸಂಖ್ಯೆಯಗಳನ್ನು ಹೊಂದಿವೆ.
ನವದೆಹಲಿ ರೈಲು ನಿಲ್ದಾಣ 2023-24ರಲ್ಲಿ 39,362,272 ಪ್ರಯಾಣಿಕರೊಂದಿಗೆ 3,337 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ. ಹೌರಾದಲ್ಲಿ 1,692 ಕೋಟಿ ಗಳಿಕೆ ಮತ್ತು 61,329,319 ಪ್ರಯಾಣಿಕರನ್ನು ಹೊಂದಿದ್ದರೆ, ಚೆನ್ನೈನ MGR ಸೆಂಟ್ರಲ್ 30,599,837 ಪ್ರಯಾಣಿಕರಿಂದ 1,299 ಕೋಟಿ ಆದಾಯವನ್ನು ಗಳಿಸಿದೆ.
ಇತರ ರೈಲ್ವೇ ನಿಲ್ದಾಣಗಳನ್ನು, NSG-1 (ನಾನ್-ಸಬರ್ಬನ್ ಗ್ರೇಡ್-I) ಎಂದು ವರ್ಗೀಕರಿಸಲಾಗಿದೆ. ದೆಹಲಿ, ಹೌರಾ, ಚೆನ್ನೈ ನಂತರದ ಸ್ಥಾನದಲ್ಲಿ ಸಿಕಂದರಾಬಾದ್ ಇದ್ದು, 27,776,937 ಪ್ರಯಾಣಿಕರಿಂದ ವಾರ್ಷಿಕ 12,76 ಕೋಟಿ ಆದಾಯವನ್ನು ಗಳಿಸುತ್ತಿದೆ. ಹಜರತ್ ನಿಜಾಮುದ್ದೀನ್ 14,6865 ಪ್ರಯಾಣಿಕರಿಂದ 1,227 ಕೋಟಿ ಆದಾಯವನ್ನು ಹೊಂದಿದೆ. ಮುಂಬೈನ ಲೋಕಮಾನಯ ತಿಲಕ್ ಟರ್ಮಿನಲ್ 14,680,379 ಪ್ರಯಾಣಿಕರಿಂದ 1,036 ಕೋಟಿ ರೂಗಳ ಆದಾಯ, ಅಹಮದಾಬಾದ್ 18,260,021 ಪ್ರಯಾಣಿಕರಿಂದ 1,010 ಕೋಟಿ ರೂ. ಮತ್ತು ಮುಂಬೈ ಸಿಎಸ್‌ಟಿ 51,652,230 ಪ್ರಯಾಣಿಕರಿಂದ 9,82 ಕೋಟಿ ರೂ ಆದಾಯ ಹೊಂದಿದೆ.
ಈ NGS-1 ನಿಲ್ದಾಣಗಳ ಜೊತೆಗೆ, ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣ ಮತ್ತು ದೆಹಲಿಯ ಆನಂದ್ ವಿಹಾರ್ ಕೂಡ 100 ಉನ್ನತ ಆದಾಯದ ನಿಲ್ದಾಣಗಳಲ್ಲಿ ಕಾಣಿಸಿಕೊಂಡಿವೆ. ಪುಣೆ 22,256,812 ಪ್ರಯಾಣಿಕರಿಂದ 9,76 ಕೋಟಿ ರೂಪಾಯಿ ವಾರ್ಷಿಕ ಆದಾಯವನ್ನು ದಾಖಲಿಸಿದೆ ಮತ್ತು ಆನಂದ್ ವಿಹಾರ್ 12,235,275 ಪ್ರಯಾಣಿಕರಿಂದ 8,44 ಕೋಟಿ ರೂಪಾಯಿಗಳನ್ನು ಗಳಿಸಿದೆ.
Advertisement