ರತನ್ ಟಾಟಾ ಅಂತಿಮ ನಮನ: ಮುಂಬೈ ಪೊಲೀಸರಿಂದ ಬ್ಯಾಂಡ್ ಗೌರವ

ಪೊಲೀಸ್ ಬ್ಯಾಂಡ್‌ನ ಶ್ರದ್ಧಾಂಜಲಿ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು.
ರತನ್ ಟಾಟಾ
ರತನ್ ಟಾಟಾ
Updated on

ಮುಂಬೈ: ದಂತಕಥೆ, ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ ಅವರ ಮನೆಯಿಂದ ಬಿಳಿ ಹೂವುಗಳಿಂದ ಅಲಂಕರಿಸಲ್ಪಟ್ಟ ಆಂಬ್ಯುಲೆನ್ಸ್ ನಲ್ಲಿ ದಕ್ಷಿಣ ಮುಂಬೈನ ಎನ್‌ಸಿಪಿಎಗೆ ಕೊಂಡೊಯ್ಯಲಾಯಿತು, ಅಲ್ಲಿ ಜನರಿಗೆ ಅಂತಿಮ ನಮನ ಸಲ್ಲಿಸಲು ಇಡಲಾಗಿದೆ.

ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (NCPA) ದಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಟಾಟಾ ಅವರ ಮನೆಯಿಂದ ವಾಹನವು ಬರುವ ಮೊದಲು, ಮುಂಬೈ ಪೊಲೀಸ್ ಬ್ಯಾಂಡ್ ಅವರಿಗೆ ಗೌರವಾರ್ಥವಾಗಿ ಸಂಗೀತ ನುಡಿಸಿತು.

ಪೊಲೀಸ್ ಬ್ಯಾಂಡ್‌ನ ಶ್ರದ್ಧಾಂಜಲಿ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು.

ಟಾಟಾ ಗ್ರೂಪ್ ಉದ್ಯೋಗಿಗಳಿಗೆ ಪ್ರತ್ಯೇಕ ಮಾರ್ಗ: ರತನ್ ಟಾಟಾ ಅವರ ಕಳೇಬರಕ್ಕೆ ಅಂತಿಮ ನಮನ ಸಲ್ಲಿಸಲು ದಕ್ಷಿಣ ಮುಂಬೈನ ಎನ್‌ಸಿಪಿಎಯಲ್ಲಿ ಸಾರ್ವಜನಿಕರು ಸೇರುತ್ತಿರುವಾಗ, ಟಾಟಾ ಗ್ರೂಪ್ ನ ಉದ್ಯೋಗಿಗಳಿಗೆ ಪ್ರತ್ಯೇಕ ಸರದಿಯನ್ನು ನೀಡಲಾಗಿದೆ. ಅವರು ಪ್ರತ್ಯೇಕವಾಗಿ ಸಾಲಾಗಿ ಬಂದು ನಮನ ಸಲ್ಲಿಸುತ್ತಿದ್ದಾರೆ.

ಟಾಟಾ ಉದ್ಯೋಗಿಗಳ ಸಾಲು ಸಾಮಾನ್ಯ ಜನರಂತೆ ಉದ್ದವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com