ಕಾಶ್ಮೀರದೊಳಗೆ ನುಸುಳಲು 150 ಉಗ್ರರು ಕಾಯುತ್ತಿದ್ದಾರೆ: BSF

ಒಳನುಸುಳುವಿಕೆಯ ಯತ್ನಗಳು ನಡೆಯುತ್ತಲೇ ಇವೆ. ವಿವಿಧ ಏಜೆನ್ಸಿಗಳಿಂದ ಪಡೆಯುವ ಗುಪ್ತಚರ ಮಾಹಿತಿ ಆಧಾರದ ಮೇಲೆ ಗಡಿಯುದ್ದಕ್ಕೂ ಪ್ರಾಬಲ್ಯ ಸ್ಥಾಪಿಸಲು ಸೇನೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ಒಳ ನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸುತ್ತವೆ
ಉಗ್ರರ ಸಾಂದರ್ಭಿಕ ಚಿತ್ರ
ಉಗ್ರರ ಸಾಂದರ್ಭಿಕ ಚಿತ್ರ
Updated on

ಶ್ರೀನಗರ: ಚಳಿಗಾಲ ಸಮೀಪಿಸುತ್ತಿದ್ದಂತೆ ಕಾಶ್ಮೀರ ಕಣಿವೆಯೊಳಗೆ ನುಸುಳಲು ಸುಮಾರು 150 ಉಗ್ರರು ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಲಾಂಚ್‌ಪ್ಯಾಡ್‌ಗಳಲ್ಲಿ ಕಾಯುತ್ತಿದ್ದಾರೆ ಎಂದು ಹಿರಿಯ BSF ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ ಫ್ರಾಂಟಿಯರ್) ಅಶೋಕ್ ಯಾದವ್, ಒಳನುಸುಳುವಿಕೆಯ ಯತ್ನಗಳು ನಡೆಯುತ್ತಲೇ ಇವೆ. ವಿವಿಧ ಏಜೆನ್ಸಿಗಳಿಂದ ಪಡೆಯುವ ಗುಪ್ತಚರ ಮಾಹಿತಿ ಆಧಾರದ ಮೇಲೆ ಗಡಿಯುದ್ದಕ್ಕೂ ಪ್ರಾಬಲ್ಯ ಸ್ಥಾಪಿಸಲು ಸೇನೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ಒಳ ನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸುತ್ತವೆ ಎಂದರು.

ಲಾಂಚ್‌ಪ್ಯಾಡ್‌ಗಳಲ್ಲಿ ಈಗ ಎಷ್ಟು ಉಗ್ರರು ಕಾಯುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಾದವ್, ಉಡಾವಣಾ ಪ್ಯಾಡ್‌ಗಳಲ್ಲಿ ಭಯೋತ್ಪಾದಕರ ಸಂಖ್ಯೆ ಸಾಮಾನ್ಯವಾಗಿ 130 ರಿಂದ 150 ರ ನಡುವೆ ಬದಲಾಗುತ್ತದೆ, ಕೆಲವೊಮ್ಮೆ ಅದು ಸ್ವಲ್ಪ ಹೆಚ್ಚಿರಬಹುದು ಎಂದು ಹೇಳಿದರು.

ಶಾಂತಿಯುತವಾಗಿ ಜಮ್ಮು- ಕಾಶ್ಮೀರ ವಿಧಾನಸಭಾ ಚುನಾವಣೆ ನಂತರದ ಸವಾಲುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಚಳಿಗಾಲ ಪ್ರಾರಂಭವಾಗುವ ಮೊದಲು, ಭಯೋತ್ಪಾದಕರು ಆಗಾಗ್ಗೆ ಒಳನುಸುಳುವಿಕೆಗೆ ಪ್ರಯತ್ನಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದೇವೆ. ಎಲ್ಒಸಿ ಉದ್ದಕ್ಕೂ ಸಂಭಾವ್ಯ ಒಳನುಸುಳುವಿಕೆ ಬಗ್ಗೆ ಮಾಹಿತಿಯಿದೆ ಎಂದರು.

ಉಗ್ರರ ಸಾಂದರ್ಭಿಕ ಚಿತ್ರ
ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಬೇಟೆ: ಕುಪ್ವಾರದಲ್ಲಿ ಒಳನುಸುಳುವಿಕೆ ಯತ್ನ ವಿಫಲ; ಇಬ್ಬರು ಉಗ್ರರು ಹತ್ಯೆ

ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಲಾಭ ಪಡೆಯಲು ಉಗ್ರರು ಪ್ರಯತ್ನಿಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಾದಕ ದ್ರವ್ಯಗಳು ಎಲ್‌ಒಸಿಯಾದ್ಯಂತ ಬರುತ್ತಿದ್ದು, ಭಯೋತ್ಪಾದನೆಗೆ ಹಣಕಾಸು ಪೂರೈಸುವ ಉತ್ತಮ ಮೂಲವಾಗಿದೆ.

ಎಲ್‌ಒಸಿಯ ಉದ್ದಕ್ಕೂ ಕೆಲವು ಹಳ್ಳಿಗಳಿವೆ. ಅಂತಹ ಕಡೆಗಳಲ್ಲಿ ಮೊಬೈಲ್ ಬಂಕರ್‌ಗಳು ಮತ್ತು ಮಹಿಳಾ ಸೈನಿಕರನ್ನು ನಿಯೋಜಿಸಿದ್ದೇವೆ. ಏಕೆಂದರೆ ಉಗ್ರರು ಕೆಲವು ಮಹಿಳೆಯರನ್ನು ಕೊರಿಯರ್‌ಗಳಾಗಿ ಬಳಸಿಕೊಳ್ಳಬಹುದು ಅಲ್ಲದೇ ಮಾದಕ ದ್ರವ್ಯದ ಒಳ ಹರಿವು ತಡೆಯಬಹುದಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com