
ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಗೆ ನಾಲ್ವರು ಸ್ವತಂತ್ರ ಶಾಸಕರು ತಮ್ಮ ಬೆಂಬಲವನ್ನು ಘೋಷಿಸಿದ್ದರಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಒಮರ್ ಅಬ್ದುಲ್ಲಾ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದಾರೆ.
90 ಸದಸ್ಯರ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಎನ್‌ಸಿ 42 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಾಲ್ವರು ಸ್ವತಂತ್ರರ ಬೆಂಬಲದೊಂದಿಗೆ, ಪಕ್ಷದ ಬಲವು 46 ಕ್ಕೆ ಏರಿದೆ, ಬಹುಮತಕ್ಕಿಂತ ಒಂದು ಹೆಚ್ಚಾಗಿದೆ. ಎನ್‌ಸಿ ಶಾಸಕಾಂಗ ಪಕ್ಷವು ಗುರುವಾರ ಶ್ರೀನಗರದ ತನ್ನ ಪ್ರಧಾನ ಕಚೇರಿಯಲ್ಲಿ ಸಭೆ ಶಾಸಕರು ಒಮರ್ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು. ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಮತ್ತು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಎನ್‌ಸಿ ಶಾಸಕರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಒಮರ್ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು. ಒಮರ್ ಅವರು 2009 ರಿಂದ 2014 ರವರೆಗೆ ಹಿಂದಿನ ಜೆ & ಕೆ ರಾಜ್ಯದಲ್ಲಿ ಎನ್‌ಸಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಚರ್ಚಿಸಿ ನಂತರ, ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸುತ್ತೇವೆ ಎಂದು ಹೇಳಿದ್ದಾರೆ.
ಚುನಾವಣಾ ಪೂರ್ವ ಮೈತ್ರಿಕೂಟದ ಪಾಲುದಾರರಾದ ಎನ್‌ಸಿ, ಕಾಂಗ್ರೆಸ್ ಮತ್ತು ಸಿಪಿಎಂ ಶುಕ್ರವಾರ ಸರ್ಕಾರ ರಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಭೆಯನ್ನು ಕರೆಯಲಿವೆ. "ಕಾಂಗ್ರೆಸ್‌ನೊಂದಿಗೆ ಪ್ರಸ್ತುತ ಚರ್ಚೆಗಳು ನಡೆಯುತ್ತಿವೆ, ಅದು ತನ್ನ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಅವರ ಬೆಂಬಲ ಪತ್ರವನ್ನು ನೀಡಲು ಒಂದು ದಿನವನ್ನು ಕೋರಿದೆ ಎಂದು ಎನ್‌ಸಿ ನಾಯಕರೊಬ್ಬರು ಹೇಳಿದರು. ಜೆ & ಕೆ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಕರ್ರಾ ಪ್ರಸ್ತುತ ದೆಹಲಿಯಲ್ಲಿ ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಆರು ಕಾಂಗ್ರೆಸ್ ಶಾಸಕರು ಮತ್ತು ಏಕೈಕ ಸಿಪಿಎಂ ಶಾಸಕರ ಬೆಂಬಲದೊಂದಿಗೆ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟದ ಸಂಖ್ಯೆ 53 ಕ್ಕೆ ಏರಿದೆ. ನಾಲ್ವರು ಸ್ವತಂತ್ರ ಶಾಸಕರು ಜಮ್ಮು ಪ್ರದೇಶದಿಂದ ಗೆದ್ದಿದ್ದಾರೆ.
Advertisement