ನಾಸಿಕ್: ಫೈರಿಂಗ್ ಅಭ್ಯಾಸದ ವೇಳೆಯಲ್ಲಿ ಇಬ್ಬರು ಅಗ್ನಿವೀರರು ಹುತಾತ್ಮರಾದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದ್ದು, ಘಟನೆಗೆ ಕಾರಣ ಪತ್ತೆಗೆ ಮಿಲಿಟರಿ ನ್ಯಾಯಾಲಯದಿಂದ ತನಿಖೆಗೆ ಸೇನೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಟಿಲರಿ ಸೆಂಟರ್ ಹೈದರಾಬಾದ್‌ನ ಗೋಹಿಲ್ ವಿಶ್ವರಾಜ್‌ಸಿನ್ಹ್ (20) ಮತ್ತು ಸೈಕತ್ (21) ನಾಸಿಕ್ ಜಿಲ್ಲೆಯ ಡಿಯೋಲಾಲಿ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಗುಂಡಿನ ಅಭ್ಯಾಸದ ವೇಳೆಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಗ್ನಿವೀರ್‌ಗಳ ತಂಡ ಫೀಲ್ಡ್ ಗನ್‌ನಿಂದ ಗುಂಡು ಹಾರಿಸುತ್ತಿದ್ದಾಗ ಶೆಲ್‌ಗಳಲ್ಲಿ ಒಂದು ಸ್ಫೋಟಗೊಂಡಿತು. ಪರಿಣಾಮ ಗಾಯಗೊಂಡ ಇಬ್ಬರನ್ನು ಡಿಯೋಲಾಲಿಯಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಹುತಾತ್ಮರಾಗಿರುವುದಾಗಿ ಘೋಷಿಸಲಾಗಿಯಿತು. ಈ ಸಂಬಂಧ ಹವಾಲ್ದಾರ್ ಅಜಿತ್ ಕುಮಾರ್ ನೀಡಿದ ದೂರಿನ ಮೇರೆಗೆ ದೇವಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ತರಬೇತಿ ಪಡೆಯುತ್ತಿರುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕೆಚ್ಚೆದೆಯ ಅಗ್ನಿವೀರರಿಗೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಸೇನೆಯಲ್ಲಿಯರುವ ಎಲ್ಲಾ ಶ್ರೇಣಿಯ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದ್ದು, ದುರಂತಕ್ಕೆ ನಿಖರಾದ ಕಾರಣ ತಿಳಿಯಲು ಮಿಲಿಟರಿ ನ್ಯಾಯಾಲಯದಿಂದ ತನಿಖೆಗೆ ಆದೇಶಿಸಲಾಗಿದೆ ಎಂದು ಸೇನೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ.
Advertisement