ಉತ್ತರಾಖಂಡ: ರೈಲು ಹಳಿಯಲ್ಲಿ ಖಾಲಿ ಸಿಲಿಂಡರ್ ಪತ್ತೆ!

ಉತ್ತರಾಖಂಡದ ಧಂಧೇರಾ ಬಳಿಯ ರೈಲ್ವೆ ಹಳಿಯಲ್ಲಿ ಭಾನುವಾರ ಬೆಳಗ್ಗೆ ಖಾಲಿ ಸಿಲಿಂಡರ್ ಪತ್ತೆಯಾಗಿದೆ.
ರೈಲು ಹಳ್ಳಿಯಲ್ಲಿ ಸಿಲಿಂಡರ್ ಬಿದ್ದಿರುವುದು
ರೈಲು ಹಳ್ಳಿಯಲ್ಲಿ ಸಿಲಿಂಡರ್ ಬಿದ್ದಿರುವುದು
Updated on

ಧಂಧೇರಾ: ರೈಲುಗಳನ್ನು ಹಳಿ ತಪ್ಪಿಸುವ ಹಾಗೂ ರೈಲು ಸೇವೆಯಲ್ಲಿ ವ್ಯತ್ಯಯ ಉಂಟು ಮಾಡಲು ಯತ್ನಿಸುತ್ತಿರುವ ಪ್ರಕರಣಗಳು ಉತ್ತರ ಭಾರತದಲ್ಲಿ ಹೆಚ್ಚಾಗುತ್ತಿದೆ.

ಕಳೆದ ವಾರ ಉತ್ತರ ಪ್ರದೇಶದ ರಾಯ್ ಬರೇಲಿಯ ರಘುರಾಜ್ ಸಿಂಗ್ ನಿಲ್ದಾಣದ ಬಳಿ ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಪತ್ತೆಯಾಗಿತ್ತು. ಇದೀಗ ನೆರೆಯ ಜಿಲ್ಲೆ ಉತ್ತರಾಖಂಡದ ಧಂಧೇರಾ ಬಳಿಯ ರೈಲ್ವೆ ಹಳಿಯಲ್ಲಿ ಭಾನುವಾರ ಬೆಳಗ್ಗೆ ಖಾಲಿ ಸಿಲಿಂಡರ್ ಪತ್ತೆಯಾಗಿದೆ ಎಂದು ಉತ್ತರ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಂಡೌರಾ ಮತ್ತು ಧಂಧೇರಾ ನಡುವಿನ ಹಳಿಯಲ್ಲಿ ಸಿಲಿಂಡರ್ ಬಿದ್ದಿರುವ ವಿಷಯವನ್ನು ಗೂಡ್ಸ್ ರೈಲಿನ ಲೋಕೋ ಪೈಲಟ್ ರೂರ್ಕಿಯ ಸ್ಟೇಷನ್ ಮಾಸ್ಟರ್‌ಗೆ ತಿಳಿಸಿದ್ದಾಗಿ ಉತ್ತರ ರೈಲ್ವೆ ಮುಖ್ಯಸ್ಥ ಪಿಆರ್‌ಒ ಹಿಮಾಂಶು ಉಪಾಧ್ಯಾಯ ತಿಳಿಸಿದ್ದಾರೆ.

ಈ ಸ್ಥಳವು ಧಂಧೇರಾ ನಿಲ್ದಾಣದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಪಾಯಿಂಟ್ ಮನ್ ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಸಿಲಿಂಡರ್ ಸಂಪೂರ್ಣ ಖಾಲಿಯಾಗಿರುವುದು ಕಂಡು ಬಂದಿದೆ. ನಂತರ ಅದನ್ನು ಧಂಧೇರಾದಲ್ಲಿ ಸ್ಟೇಷನ್ ಮಾಸ್ಟರ್ ಕಸ್ಟಡಿಯಲ್ಲಿ ಇರಿಸಲಾಯಿತು.

ರೈಲು ಹಳ್ಳಿಯಲ್ಲಿ ಸಿಲಿಂಡರ್ ಬಿದ್ದಿರುವುದು
ಉತ್ತರ ಪ್ರದೇಶ: ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ ಪತ್ತೆ!

ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಜಿಆರ್‌ಪಿಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ರೂರ್ಕಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎನ್‌ಆರ್ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com