ಮುಂಬೈ: ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ಉಳಿಸಲು ವೈದ್ಯರು ಸುಮಾರು ಎರಡು ಗಂಟೆಗಳ ಕಾಲ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ನಿನ್ನೆ ಶನಿವಾರ ರಾತ್ರಿ ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯರು, ಅವರ ಎದೆಯ ಮುಂಭಾಗದಲ್ಲಿ ಎರಡು ಗುಂಡುಗಳ ಗಾಯಗಳಿದ್ದವು, ಸಾಕಷ್ಟು ರಕ್ತ ಸುರಿದು ಹೋಗಿತ್ತು. ಅವರ ಕುಟುಂಬ ಸದಸ್ಯರು ಅವರನ್ನು ಕರೆತಂದಾಗ ಅವರು ಪ್ರಜ್ಞಾಹೀನರಾಗಿದ್ದರು.
ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಬಾ ಸಿದ್ದಿಕ್ ಮೃತಪಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ, ಅವರನ್ನು ಕರೆತಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಸ್ಪಂದಿಸುತ್ತಲೂ ಇರಲಿಲ್ಲ. ರಾತ್ರಿ 11.27ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಮೊದಲು ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ನಂತರ ಐಸಿಯುಗೆ ಸ್ಥಳಾಂತರಿಸಲಾಯಿತು. ಹೃದಯ ಕಾರ್ಯನಿರ್ವಹಿಸುತ್ತಿರಲಿಲ್ಲ. ಶವಪರೀಕ್ಷೆಯಲ್ಲಿ ಹೃದಯಕ್ಕೆ ಎರಡು ಗುಂಡುಗಳು ತಾಗಿರುವ ಬಗ್ಗೆ ತಿಳಿಯುತ್ತದೆ. ಮರಣೋತ್ತರ ಪರೀಕ್ಷೆಯಲ್ಲಿ ಹೆಚ್ಚು ಗೊತ್ತಾಗುತ್ತದೆ ಎಂದರು.
Advertisement