ದನದ ಕೊಟ್ಟಿಗೆಯಲ್ಲಿ ಮಲಗಿದರೆ ಕ್ಯಾನ್ಸರ್ ಗುಣವಾಗುತ್ತದೆ: ಉತ್ತರ ಪ್ರದೇಶ ಸಚಿವ ಗಂಗ್ವಾರ್

ಕ್ಯಾನ್ಸರ್ ರೋಗಿಯು ದನದ ಕೊಟ್ಟಿಗೆಯನ್ನು ಶುಚಿಗೊಳಿಸಿ, ಅಲ್ಲಿ ಮಲಗಿದರೆ ಕ್ಯಾನ್ಸರ್ ಕೂಡ ವಾಸಿಯಾಗುತ್ತದೆ. ನೀವು ಹಸುವಿನ ಬೆರಣಿ ಸುಟ್ಟರೆ, ಸೊಳ್ಳೆಗಳ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಆದ್ದರಿಂದ ಪಶುಸಂಗೋಪನೆ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ.
ಸಂಜಯ್ ಸಿಂಗ್ ಗಂಗ್ವಾರ್
ಸಂಜಯ್ ಸಿಂಗ್ ಗಂಗ್ವಾರ್
Updated on

ಲಕ್ನೋ: ಕ್ಯಾನ್ಸರ್‌ ರೋಗಿಗಳು ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಅಲ್ಲಿ ಮಲಗುವುದರಿಂದ ಕ್ಯಾನ್ಸರ್‌ ರೋಗ ಗುಣಮುಖವಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿಕೆ ನೀಡಿದ್ದಾರೆ.

ಕಬ್ಬು ಬೆಳೆ ಅಭಿವೃದ್ಧಿಯ ಸಚಿವ ಗಂಗ್ವಾರ್, ಭಾನುವಾರ ತಮ್ಮ ಕ್ಷೇತ್ರವಾದ ಪಿಲಿಭಿತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದರು. ಕ್ಯಾನ್ಸರ್ ರೋಗಿಯು ದನದ ಕೊಟ್ಟಿಗೆಯನ್ನು ಶುಚಿಗೊಳಿಸಿ, ಅಲ್ಲಿ ಮಲಗಿದರೆ ಕ್ಯಾನ್ಸರ್ ಕೂಡ ವಾಸಿಯಾಗುತ್ತದೆ. ನೀವು ಹಸುವಿನ ಬೆರಣಿ ಸುಟ್ಟರೆ, ಸೊಳ್ಳೆಗಳ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಆದ್ದರಿಂದ ಪಶುಸಂಗೋಪನೆ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ಅಧಿಕ ರಕ್ತದೊತ್ತಡದ ರೋಗಿಗಳಿದ್ದರೆ ಕೇಳಿ. ಇಲ್ಲಿ ಹಸುಗಳಿವೆ. ನೀವು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಸುಗಳ ಸೇವೆ ಮಾಡುವುದರಿಂದ ಔಷಧವನ್ನು ಅರ್ಧ ಪ್ರಮಾಣಕ್ಕೆ ಇಳಿಸಬಹುದು. ಒಬ್ಬ ವ್ಯಕ್ತಿ ರಕ್ತದೊತ್ತಡಕ್ಕೆ ಔಷಧಿಯಾಗಿ 20 ಮಿ.ಗ್ರಾಂ ಡೋಸ್ ತೆಗೆದುಕೊಳ್ಳುತ್ತಿದ್ದರೆ, ಹಸುಗಳ ಸೇವೆಯಿಂದ 10 ದಿನಗಳಲ್ಲಿ 10 ಮಿ.ಗ್ರಾಂಗೆ ಔಷಧಿ ಪ್ರಮಾಣ ಇಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಗೋಶಾಲೆಗಳೊಂದಿಗೆ ಜನರನ್ನು ಸಂಪರ್ಕಿಸುವುದು ನಮ್ಮ ಪ್ರಯತ್ನ. ಜನ ತಮ್ಮ ವಿವಾಹ ವಾರ್ಷಿಕೋತ್ಸವ ಹಾಗೂ ಮಕ್ಕಳ ಜನ್ಮದಿನವನ್ನು ಗೋಶಾಲೆಯಲ್ಲಿ ಆಚರಿಸಬೇಕು. ಹಾಗೂ ಗೋಶಾಲೆಗೆ ಮೇವನ್ನು ದಾನ

ಸಂಜಯ್ ಸಿಂಗ್ ಗಂಗ್ವಾರ್
ಇನ್ನು ಮುಂದೆ ಹಸುಗಳಿಗೆ 'ಬಿಡಾಡಿ ದನ' ಎಂದು ಕರೆಯುವಂತಿಲ್ಲ: ರಾಜಸ್ಥಾನ ಸಚಿವ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com