ನವದೆಹಲಿ: COVID-19 ಲಸಿಕೆಗಳನ್ನು ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳು, ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಕೇವಲ ಸಂಚಲನ ಮೂಡಿಸಲು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಛೀಮಾರಿ ಹಾಕಿದೆ.
ನೀವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವುದಾದರೆ ಸೂಕ್ತ ಮೊಕದ್ದಮೆಯನ್ನು ದಾಖಲಿಸಿ, ಇಂಥವುಗಳಿಂದ ಏನು ಪ್ರಯೋಜನ ನೀವು ಕೋವಿಡ್ ಲಸಿಕೆ ತೆಗೆದುಕೊಳ್ಳದಿದ್ದರೆ ಅದರಿಂದ ಆಗುವ ಅಡ್ಡಪರಿಣಾಮ ಏನೆಂದು ಸಹ ಅರ್ಥಮಾಡಿಕೊಳ್ಳಿ. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಾವು ಬಯಸುವುದಿಲ್ಲ, ಇದು ಕೇವಲ ಸಂಚಲನವನ್ನು ಸೃಷ್ಟಿಸಲು ಮಾತ್ರ ಹಾಕಿರುವ ಅರ್ಜಿಯಷ್ಟೆ ಎಂದು ನ್ಯಾಯಪೀಠ ಹೇಳಿದೆ.
ಕೋವಿಡ್ ಲಸಿಕೆಯಿಂದಾಗುತ್ತಿರುವ ಅಡ್ಡಪರಿಣಾಮಗಳ ಬಗ್ಗೆ ಪ್ರಿಯಾ ಮಿಶ್ರಾ ಮತ್ತು ಇತರ ಅರ್ಜಿದಾರರು ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದರು.
Advertisement