
ನವದೆಹಲಿ: ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲಿ ಹಿಂದೂಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಶುಕ್ರವಾರ ಕಿಡಿಕಾರಿರುವ ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಜಾಗತಿಕ ಮೌನವನ್ನು ಪ್ರಶ್ನಿಸಿದ್ದಾರೆ. ಅಂತಹ ಉಲ್ಲಂಘನೆಗಳನ್ನು ಸಹಿಸಿಕೊಳ್ಳುವುದು ಸೂಕ್ತವಲ್ಲಾ ಎಂದಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಂಸ್ಥಾಪನಾ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ನೈತಿಕತೆಯ ಬೋಧಕರು, ಮಾನವ ಹಕ್ಕುಗಳ ಪಾಲಕರು ಎಂದು ಕರೆದುಕೊಳ್ಳುವವರ ಮೌನವನ್ನು ಪ್ರಶ್ನಿಸಿದರು. ಅವರು ಸಂಪೂರ್ಣವಾಗಿ ಮಾನವ ಹಕ್ಕುಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರು ಎಂದು ಟೀಕಿಸಿದರು.
ನಾವು ತುಂಬಾ ಸಹಿಷ್ಣುಗಳು ಮತ್ತು ಅಂತಹ ಮಾನವ ಹಕ್ಕುಗಳ ಉಲ್ಲಂಘನೆ ತುಂಬಾ ಸಹಿಷ್ಣುರಾಗಿರುವುದು ಸೂಕ್ತವಲ್ಲ ಎಂದು ಅವರು ಹೇಳಿದರು. ನೀವು ಅಂತಹವರಲ್ಲಿ ಒಬ್ಬರಾಗಿದ್ದಲ್ಲಿ ಯೋಚಿಸಿ ಎಂದು ಅಲ್ಲಿದ್ದ ಜನರಿಗೆ ಹೇಳಿದರು.
ಇಂತಹ ಬರ್ಬರತೆ, ಕಿರುಕುಳ, ಅನುಭವ ಹೊಂದಿರುವ ಬಾಲಕ, ಬಾಲಕಿಯರು, ಮಹಿಳೆಯರನ್ನು ನೋಡಿ, ಧ್ವಂಸವಾಗುತ್ತಿರುವ ನಮ್ಮ ದೇವಾಲಯಗಳ ಕಡೆಗೆ ಗಮನ ಹರಿಸಿ ಎಂದು ಹೇಳಿದರು. ಆದರೆ, ಯಾವುದೇ ದೇಶದ ಹೆಸರನ್ನು ಅವರು ಹೇಳಲಿಲ್ಲ.
ಕೆಲವು ವಿನಾಶಕಾರಿ ಶಕ್ತಿಗಳು ಭಾರತದ ವರ್ಚಸ್ಸುನ್ನು ಕುಂದಿಸಲು ಯತ್ನಿಸುತ್ತಿವೆ. ಅಂತಹ ಪ್ರಯತ್ನಗಳಿಗೆ ಕಡಿವಾಣ ಹಾಕಲು ಪ್ರತಿದಾಳಿಗೆ ಕರೆ ನೀಡಿದ ಧಂಕರ್, ಭಾರತ ಮಾನವ ಹಕ್ಕುಗಳ ಕುರಿತು ಧರ್ಮೋಪದೇಶ ಮಾಡಲು ಅಥವಾ ಉಪನ್ಯಾಸ ನೀಡಲು ಇಷ್ಟಪಡುವುದಿಲ್ಲ. ರಾಷ್ಟ್ರ ವಿಭಜನೆ, ತುರ್ತು ಪರಿಸ್ಥಿತಿ ಹೇರಿಕೆ ಮತ್ತು 1984 ರ ಸಿಖ್ ವಿರೋಧಿ ದಂಗೆಗಳನ್ನು ಆಘಾತಕಾರಿ ಘಟನೆಗಳು ಎಂದು ಅವರು ಹೇಳಿದರು.
ಕೆಲವು ವಿನಾಶಕಾರಿ ಶಕ್ತಿಗಳಿವೆ. ಅವುಗಳು ರಚನಾತ್ಮಕ ರೀತಿಯಲ್ಲಿ ಅನ್ಯಾಯವಾಗಿ ನಮ್ಮನ್ನು ಕಳಂಕಗೊಳಿಸಲು ಪ್ರಯತ್ನಿಸುತ್ತಿವೆ. ಈ ಶಕ್ತಿಗಳು ಕೆಟ್ಟದಾಗಿ ರೂಪಿಸಲಾದ ನಮ್ಮ ಮಾನವ ಹಕ್ಕುಗಳ ದಾಖಲೆಯನ್ನು ಪ್ರಶ್ನಿಸಲು ಅಂತರಾಷ್ಟ್ರೀಯ ವೇದಿಕೆಗಳನ್ನು ಬಳಸಿಕೊಳ್ಳುತ್ತಿವೆ. ಅಂತಹ ಶಕ್ತಿಗಳನ್ನು ತಟಸ್ಥಗೊಳಿಸುವ ಅವಶ್ಯಕತೆಯಿದೆ ಮತ್ತು ಅವುಗಳ ವಿರುದ್ಧ ಪ್ರತಿದಾಳಿ ನಡೆಸುವ ಮೂಲಕ ತಟಸ್ಥಗೊಳಿಸಬೇಕು ಎಂದು ಕರೆ ನೀಡಿದರು.
ಈ ಶಕ್ತಿಗಳು ಸೂಚ್ಯಂಕಗಳನ್ನು ರೂಪಿಸುತ್ತಿದ್ದು, ನಮ್ಮ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸಲು ಯತ್ನಿಸುತ್ತಿವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು 80 ಕೋಟಿಗೂ ಹೆಚ್ಚು ಜನರಿಗೆ ಅವರ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಉಚಿತ ಪಡಿತರ ನೀಡುವ ಮೂಲಕ ಹಸಿವನ್ನು ನೀಗಿಸಿದೆ ಎಂದು ಹೇಳುವ ಮೂಲಕ ಹಸಿವಿನ ಸೂಚ್ಯಂಕ ವಿರುದ್ಧ ಧಂಕರ್ ಟೀಕಾ ಪ್ರಹಾರ ನಡೆಸಿದರು.
Advertisement