ಜಾರ್ಖಂಡ್: ಜಾರ್ಖಂಡ್ ನಲ್ಲಿ ಕಾಂಗ್ರೆಸ್- ಜೆಎಂಎಂ INDI ಮೈತ್ರಿಕೂಟ ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಸ್ಥಾನ ಹಂಚಿಕೆ ಪ್ರಸ್ತಾವನೆಯ ಬಗ್ಗೆ ಆರ್ ಜೆಡಿ ತೀವ್ರ ಅಸಮಾಧಾನ ಹೊರಹಾಕಿದೆ.
81 ಸ್ಥಾನಗಳಲ್ಲಿ 70 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಸ್ಪರ್ಧಿಸಲಿವೆ ಎಂದು ಜಾರ್ಖಂಡ್ ನ ಸಿಎಂ ಹೇಮಂತ್ ಸೊರೇನ್ ಘೋಷಿಸಿದ್ದಾರೆ.
ಉಳಿದ 11 ಸ್ಥಾನಗಳ ಹಂಚಿಕೆ ಕುರಿತು ಆರ್ ಜೆಡಿ ಹಾಗೂ ಎಡಪಕ್ಷಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಸೊರೇನ್ ಇಂದು ಹೇಳಿದರು. ಮೈತ್ರಿಕೂಟದ ಸ್ಥಾನ ಹಂಚಿಕೆ ಪ್ರಸ್ತಾವನೆ ವಿಷಯವಾಗಿ ಆರ್ ಜೆಡಿ ತೀವ್ರ ಅಸಮಾಧಾನ ಹೊರಹಾಕಿದೆ.
ಇಂಡಿಯಾ ಬ್ಲಾಕ್ ನ 2 ಘಟಕಗಳ ಸೀಟು ಹಂಚಿಕೆಯ ನಿರ್ಧಾರ 'ಏಕಪಕ್ಷೀಯ' ಎಂದು ಆರ್‌ಜೆಡಿ ಹೇಳಿದೆ. ಪಕ್ಷಕ್ಕೆ 'ಎಲ್ಲ ಆಯ್ಕೆಗಳು ಮುಕ್ತವಾಗಿವೆ' ಎಂದೂ ಅದು ಸ್ಪಷ್ಟಪಡಿಸಿದೆ.
ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. "ನಮಗೆ ಸೀಟುಗಳ ಪ್ರಸ್ತಾಪದ ಬಗ್ಗೆ ನಾವು ನಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತೇವೆ. ನಿರ್ಧಾರವು ಏಕಪಕ್ಷೀಯವಾಗಿದೆ" ಎಂದು ಆರ್ಜೆಡಿ ವಕ್ತಾರ ಮನೋಜ್ ಕುಮಾರ್ ಝಾ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಸ್ಪರ್ಧಿಸಲು ಆರ್‌ಜೆಡಿ ಕನಿಷ್ಠ 15 ರಿಂದ 18 ಸ್ಥಾನಗಳನ್ನು ಗುರುತಿಸಿದೆ. ಅಲ್ಲಿ ಭಾರತೀಯ ಜನತಾ ಪಕ್ಷವನ್ನು ಸ್ವಂತವಾಗಿ ಸೋಲಿಸುವ ಸಾಮರ್ಥ್ಯವಿದೆ ಎಂದು ಅವರು ಹೇಳಿದರು. ಕಳೆದ ಬಾರಿ ಆರ್ ಜೆಡಿ ಪಕ್ಷ ಸ್ಪರ್ಧಿಸಿದ್ದ ಏಳು ಸ್ಥಾನಗಳಲ್ಲಿ ಐದರಲ್ಲಿ ಸೋಲು ಕಂಡಿತ್ತು.
Advertisement