19ನೇ ವಾರ್ಷಿಕೋತ್ಸವ: ದೂರುಗಳ ಹೆಚ್ಚಳ ಮಧ್ಯೆ ಸಿಬ್ಬಂದಿ ಕೊರತೆ ಎದುರಿಸುತ್ತಿರುವ RTI

ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ನೇತೃತ್ವದ ಸಿವಿಲ್ ಸೊಸೈಟಿ ಗ್ರೂಪ್ ಸತಾರ್ಕ್ ನಾಗ್ರಿಕ್ ಸಂಘಟನೆಯು ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ಜೂನ್ 30 ರ ಹೊತ್ತಿಗೆ ದೇಶಾದ್ಯಂತ 29 ಮಾಹಿತಿ ಆಯೋಗಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ.
Central information comission
ಕೇಂದ್ರ ಮಾಹಿತಿ ಆಯೋಗ
Updated on

ನವದೆಹಲಿ: ಕೇಂದ್ರ ಮಾಹಿತಿ ಆಯೋಗ (CIC) ಮತ್ತು ರಾಜ್ಯ ಮಾಹಿತಿ ಆಯೋಗಗಳಲ್ಲಿ (SICs) ಖಾಲಿ ಇರುವ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಒಂದು ವರ್ಷದ ನಂತರ, ಪಾರದರ್ಶಕತೆ ಕಾವಲುಗಾರ ಸಂಸ್ಥೆಯಾದ ಮಾಹಿತಿ ಹಕ್ಕು ಆಯೋಗ(RTI) ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ ಎಂದು ತಿಳಿದುಬಂದಿದೆ. ಪ್ರಕರಣಗಳನ್ನು ಇತ್ಯರ್ಥಪಡಿಸಲು ಮತ್ತು ದೂರುಗಳ ಬ್ಯಾಕ್‌ಲಾಗ್‌ನಲ್ಲಿ ಹೆಚ್ಚಿನ ವಿಳಂಬವಾಗುತ್ತಿರುವುದು ಸಿಬ್ಬಂದಿ ಕೊರತೆಯಿಂದ ಗೊತ್ತಾಗುತ್ತಿದೆ.

ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ನೇತೃತ್ವದ ಸಿವಿಲ್ ಸೊಸೈಟಿ ಗ್ರೂಪ್ ಸತಾರ್ಕ್ ನಾಗ್ರಿಕ್ ಸಂಘಟನೆಯು ಪ್ರಸ್ತುತಪಡಿಸಿದ ಅಂಕಿಅಂಶಗಳ ಪ್ರಕಾರ, ಜೂನ್ 30 ರ ಹೊತ್ತಿಗೆ ದೇಶಾದ್ಯಂತ 29 ಮಾಹಿತಿ ಆಯೋಗಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಪ್ರಸ್ತುತ ಸಮಿತಿಯಲ್ಲಿ ಎಂಟು ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿ ಇವೆ. ಈ ತಿಂಗಳು ಮಾಹಿತಿ ಹಕ್ಕು ಕಾಯ್ದೆ(Right to Information Act) ತನ್ನ 19ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

RTI ಕಾಯಿದೆಯ ಅಡಿಯಲ್ಲಿ, ಸಿಐಸಿ ಮಾಹಿತಿ ಆಯುಕ್ತರನ್ನು ಒಳಗೊಂಡಿರುತ್ತದೆ ಮತ್ತು ಅಗತ್ಯವೆಂದು ಪರಿಗಣಿಸಬಹುದಾದ 10 ಕ್ಕಿಂತ ಹೆಚ್ಚಿಲ್ಲದ ಕೇಂದ್ರ ಮಾಹಿತಿ ಆಯುಕ್ತರನ್ನು ಒಳಗೊಂಡಿರುತ್ತದೆ. ಇದು ರಾಜ್ಯ ಮಾಹಿತಿ ಆಯೋಗಗಳಿಗೆ (SIC) ಅನ್ವಯಿಸುತ್ತದೆ. ಪ್ರಸ್ತುತ, CIC ಕೇವಲ ಮುಖ್ಯ ಮಾಹಿತಿ ಆಯುಕ್ತರು ಮತ್ತು ಎರಡು ಭಾರತೀಯ ನಾಗರಿಕ ಸೇವೆ ಸಿಬ್ಬಂದಿಯನ್ನು ಹೊಂದಿದೆ.

ಕಾರ್ಯಕರ್ತ ಕಮೋಡೋರ್ ಲೋಕೇಶ್ ಬಾತ್ರಾ ಅವರ ಇತ್ತೀಚಿನ ಆರ್‌ಟಿಐ ಪ್ರಶ್ನೆಯಿಂದ ಸಿಐಸಿಯು ಎಂಟು ಖಾಲಿ ಐಸಿ ಹುದ್ದೆಗಳಿಗೆ 161 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಬಹಿರಂಗಪಡಿಸಿದೆ, ಆದರೂ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಇತ್ತೀಚೆಗೆ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು, ಕೇಂದ್ರ ಸರ್ಕಾರವು ಮಾಹಿತಿ ಆಯುಕ್ತರನ್ನು ನೇಮಿಸದೆ ಆರ್‌ಟಿಐ ಕಾಯ್ದೆಗೆ ಹೊಡೆತ ನೀಡಿದೆ ಎಂದು ಆರೋಪಿಸಿದ್ದರು. ಮಾಹಿತಿ ಆಯುಕ್ತರ ಎಂಟು ಹುದ್ದೆಗಳು ಖಾಲಿ ಇವೆ. ಏಕೆ? ಆರ್‌ಟಿಐ ಕಾಯ್ದೆಯನ್ನು ಸರ್ಕಾರ ಮಣ್ಣುಪಾಲು ಮಾಡಿದೆ ಎಂದು ಆರೋಪಿಸಿದ್ದರು.

Central information comission
ರೈಲಿನಲ್ಲಿ ಕೊಡುವ ಬೆಡ್‌ಶೀಟ್‌ ಮತ್ತು ಹೊದಿಕೆಗಳನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತೆ: RTI ಮಾಹಿತಿ ಬಹಿರಂಗ

ಕೇಂದ್ರವು ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತಂದಿದೆ ಮತ್ತು ಮಾಹಿತಿ ಆಯುಕ್ತರ ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ಬದಲಾಯಿಸಿದೆ - ಇವೆಲ್ಲವೂ ಆರ್‌ಟಿಐ ಕಾಯ್ದೆಯ ಪಾತ್ರವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಎಂದು ಚಿದಂಬರಂ ಆರೋಪಿಸಿದರು. ಮಾಹಿತಿ ಆಯುಕ್ತರನ್ನು ನೇಮಕ ಮಾಡದಿರುವುದು ಆರ್‌ಟಿಐ ಕಾಯಿದೆಗೆ ಹೊಡೆತ ನೀಡುವ ದಾರಿಯಾಗಿದೆ. ಖಾಲಿ ಹುದ್ದೆಗಳು ಮಾಹಿತಿ ಆಯೋಗದ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತವೆ ಎಂದು ಹೇಳಿದ್ದರು.

ಎಸ್‌ಸಿ ಕೂಡ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿತು. ಎಸ್‌ಐಸಿ ಮತ್ತು ಸಿಐಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮಾಹಿತಿ ಹಕ್ಕು ಕುರಿತ 2005ರ ಕಾನೂನು ನಿಷ್ಪರಿಣಾಮಕಾರಿಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com