ಜಮ್ಮು-ಕಾಶ್ಮೀರದ ಗಗನ್ಗೀರ್ ದಾಳಿಯ ಭಯೋತ್ಪಾದಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಗಗನ್ಗೀರ್ ಸುರಂಗ ನಿರ್ಮಾಣ ಸ್ಥಳಕ್ಕೆ ಪೂರ್ವನಿರ್ಮಿತ ಗುಡಿಸಲನ್ನು ಭಯೋತ್ಪಾದಕ ಪ್ರವೇಶಿಸುವುದನ್ನು ಕಾಣಬಹುದು. ಈತ ನಡೆಸಿದ್ದ ದಾಳಿಯಿಂದ ಆರು ಸ್ಥಳೀಯೇತರ ಕಾರ್ಮಿಕರು ಸೇರಿದಂತೆ ಏಳು ಜನರು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು.
A screen grab of the CCTV footage showing the militant entering a prefabricated hut, believed to be at the Gagangir tunnel construction site.
ಉಗ್ರಗಾಮಿ ಗಗಂಗೀರ್ ಸುರಂಗ ನಿರ್ಮಾಣ ಸ್ಥಳದಲ್ಲಿ ಪೂರ್ವನಿರ್ಮಿತ ಗುಡಿಸಲು ಪ್ರವೇಶಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯ
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಗಗನ್ಗೀರ್ ದಾಳಿಯಲ್ಲಿ ಭಾಗಿಯಾಗಿದ್ದನು ಎನ್ನಲಾದ ಫೆರಾನ್ ವೇಷದ ಭಯೋತ್ಪಾದಕನ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ, ಕಳೆದ ಅಕ್ಟೋಬರ್ 20 ರಂದು ಏಳು ಮಂದಿ ಸಾವಿಗೆ ಕಾರಣವಾದ ದಾಳಿ ನಡೆಸಿದ್ದು ಎಕೆ ರೈಫಲ್ ದಾಳಿಕೋರನೇ ಎಂಬುದು ಇನ್ನೂ ಖಚಿತವಾಗಿಲ್ಲ.

ಗಗನ್ಗೀರ್ ಸುರಂಗ ನಿರ್ಮಾಣ ಸ್ಥಳಕ್ಕೆ ಪೂರ್ವನಿರ್ಮಿತ ಗುಡಿಸಲನ್ನು ಭಯೋತ್ಪಾದಕ ಪ್ರವೇಶಿಸುವುದನ್ನು ಕಾಣಬಹುದು. ಈತ ನಡೆಸಿದ್ದ ದಾಳಿಯಿಂದ ಆರು ಸ್ಥಳೀಯೇತರ ಕಾರ್ಮಿಕರು ಸೇರಿದಂತೆ ಏಳು ಜನರು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು.

ಆದಾಗ್ಯೂ, ಭದ್ರತಾ ಅಧಿಕಾರಿಗಳು ಈ ಸಿಸಿಟಿವಿ ದೃಶ್ಯಾವಳಿಯ ನಿಖರತೆಯನ್ನು ಖಚಿತಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಜನವರಿ 27' ಎಂದು ಸಿಸಿಟಿವಿ ದೃಶ್ಯಾವಳಿಯ ದಿನಾಂಕ ತೋರಿಸುತ್ತಿದೆ. ಅದು ಸಿಸಿಟಿವಿ ಕ್ಯಾಮರಾದ ಸೆಟ್ಟಿಂಗ್ ಅಥವಾ ತಾಂತ್ರಿಕ ಸಮಸ್ಯೆಯಿಂದಾಗಿ ಎಂದು ಅಂದಾಜಿಸಲಾಗಿದ್ದು, ಭಯೋತ್ಪಾದಕರು ಹೊತ್ತೊಯ್ದ ರೈಫಲ್ ಮೇಲೆ ನೀಲಿ ಗುರುತು ಹೊಂದಿದೆ.

A screen grab of the CCTV footage showing the militant entering a prefabricated hut, believed to be at the Gagangir tunnel construction site.
ಜಮ್ಮು-ಕಾಶ್ಮೀರದ ಗಗನ್ಗೀರ್ ನಲ್ಲಿ ಉಗ್ರ ದಾಳಿ: ಕಾರ್ಮಿಕರಲ್ಲಿ ಆತಂಕದ ವಾತಾವರಣ

ದಾಳಿಯ ಸ್ಥಳದಿಂದ ಸುಮಾರು 200 ಕಿಮೀ ದೂರದಲ್ಲಿರುವ ಪಿರ್ ಪಂಜಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಇಂತಹ ರೈಫಲ್‌ಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕ ತನ್ನ ಮುಖವನ್ನು ಮುಚ್ಚಿರಲಿಲ್ಲ. ಆದರೆ ದಾಳಿಯಲ್ಲಿ ಬದುಕುಳಿದವರು, ದಾಳಿಕೋರರು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದರು ಎಂದು ಹೇಳಿದ್ದಾರೆ.

ಇದುವರೆಗೆ ಸಂಗ್ರಹಿಸಿದ ಸಾಕ್ಷ್ಯಗಳ ಬಗ್ಗೆ ಪ್ರತಿಕ್ರಿಯಿಸಲು ಈಗಲೇ ಸಾಧ್ಯವಿಲ್ಲ, ಇದು ಪ್ರಕರಣದ ಮುಂದಿನ ತನಿಖೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com