
ಪುಣೆ: ಮಹಾರಾಷ್ಟ್ರದಲ್ಲಿ ಚುನಾವಣಾ ಅಧಿಕಾರಿಗಳು ಶುಕ್ರವಾರ ಭರ್ಜರಿ ಭೇಟೆಯಾಡಿದ್ದು, ಪುಣೆಯ ಲಾಜಿಸ್ಟಿಕ್ ಸೇವಾ ಸಂಸ್ಥೆಯೊಂದರ ವಾಹನದಲ್ಲಿ ಸಾಗಿಸುತ್ತಿದ್ದ 139 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಣ್ಗಾವಲು ತಂಡ ಜಪ್ತಿ ಮಾಡಿದೆ.
ನಗರ ಮೂಲದ ಜ್ಯುವೆಲ್ಲರ್ಸ್ ಸಂಸ್ಥೆಯೊಂದು ಇದು ಕಾನೂನುಬದ್ಧ ರವಾನೆ ಎಂದು ಹೇಳಿಕೊಂಡಿದೆ.
ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಎಸ್‌ಎಸ್‌ಟಿಗಳನ್ನು ನಿಯೋಜಿಸಲಾಗಿದೆ.
ಇಲ್ಲಿನ ಸಹಕಾರನಗರ ಪ್ರದೇಶದಲ್ಲಿ ಸೀಕ್ವೆಲ್ ಗ್ಲೋಬಲ್ ಪ್ರೆಸಿಯಸ್ ಲಾಜಿಸ್ಟಿಕ್ಸ್‌ಗೆ ಸೇರಿದ ಟೆಂಪೋವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ(ವಲಯ 2) ಸ್ಮಾರ್ತನ ಪಾಟೀಲ್ ಅವರು ಹೇಳಿದ್ದಾರೆ.
"ತಪಾಸಣೆ ವೇಳೆ ವಾಹನದಲ್ಲಿದ್ದ ಪೆಟ್ಟಿಗೆಗಳಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದು, ಇದರ ಮೌಲ್ಯ 139 ರೂ. ಕೋಟಿ ರೂ. ಆಗಿದೆ. ಈ ವಾಹನವು ಮುಂಬೈನಿಂದ ಬಂದಿರುವುದು ಕಂಡುಬಂದಿದೆ. ನಾವು ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಚಿನ್ನಾಭರಣ ಸಂಸ್ಥೆ ಪಿಎನ್ ಗಾಡ್ಗಿಲ್ ಅಂಡ್ ಸನ್ಸ್ ಸಿಇಒ ಅಮಿತ್ ಮೋದಕ್ ಮಾತನಾಡಿ, ಸಾಗಿಸಲಾಗುತ್ತಿರುವ ಆಭರಣಗಳು ನಮ್ಮ ಸಂಸ್ಥೆಯ 10 ಕೆಜಿ ಸೇರಿದಂತೆ ಪುಣೆಯ ವಿವಿಧ ಆಭರಣ ಮಳಿಗೆಗಳಿಗೆ ಸೇರಿದ್ದು ಎಂದು ಹೇಳಿದ್ದಾರೆ.
Advertisement