PM Modi in Mann Ki Baat
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಯಾವುದೇ ತನಿಖಾ ಸಂಸ್ಥೆ ಫೋನ್ ಅಥವಾ ವೀಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ: ಡಿಜಿಟಲ್ ಅರೆಸ್ಟ್ ಬಗ್ಗೆ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ

ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಇಂದು ಸೈಬರ್ ಕ್ರೈಂ ವಿಷಯದ ಬಗ್ಗೆ ಮಾತನಾಡಿರುವ ಅವರು, ತನಿಖಾ ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸಲು ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿವೆ. ಈ ಅಪರಾಧಗಳಿಂದ ರಕ್ಷಿಸಿಕೊಳ್ಳುವಲ್ಲಿ ಜಾಗೃತಿ ಅಗತ್ಯ ಎಂದು ಹೇಳಿದರು.
Published on

ನವದೆಹಲಿ: "ಡಿಜಿಟಲ್ ಅರೆಸ್ಟ್" ಎಂಬ ಸೈಬರ್ ಅಪರಾಧದ ಬಗ್ಗೆ ಇಂದು ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸೈಬರ್ ಕ್ರೈಂ ಹಗರಣಗಳು ಇಂದು ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತಿದೆ, ಇಂತಹ ಸಂದರ್ಭಗಳಲ್ಲಿ ಜನರು ಯೋಚಿಸುವುದನ್ನು ನಿಲ್ಲಿಸಿ ಕ್ರಮ ಕೈಗೊಳ್ಳುವ ಮಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಜನರನ್ನು ಒತ್ತಾಯಿಸಿದರು.

ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಇಂದು ಸೈಬರ್ ಕ್ರೈಂ ವಿಷಯದ ಬಗ್ಗೆ ಮಾತನಾಡಿರುವ ಅವರು, ತನಿಖಾ ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸಲು ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿವೆ. ಈ ಅಪರಾಧಗಳಿಂದ ರಕ್ಷಿಸಿಕೊಳ್ಳುವಲ್ಲಿ ಜಾಗೃತಿ ಅಗತ್ಯ ಎಂದು ಹೇಳಿದರು.

ಸೈಬರ್ ಕ್ರೈಂಗೆ ತುತ್ತಾದವರ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿದ ನಂತರ ಜನರ ಭಯವನ್ನು ನಿವಾರಿಸಲು ಅಪರಾಧಿಗಳು ತನಿಖಾ ಸಂಸ್ಥೆ ಅಧಿಕಾರಿಗಳಂತೆ ಹೇಗೆ ಪೋಸ್ ನೀಡುತ್ತಾರೆ ಎಂಬುದನ್ನು ತೋರಿಸಲು ಪ್ರಧಾನಿ ವಿಡಿಯೊವೊಂದನ್ನು ಪ್ರದರ್ಶಿಸಿದರು.

PM Modi in Mann Ki Baat
ದೇಶದ ಭದ್ರತೆಗೆ ಸೈಬರ್ ಕ್ರೈಂ ಬೆದರಿಕೆಯಾಗಿದೆ: ಸಿಎಂ ಸಿದ್ದರಾಮಯ್ಯ

ಡಿಜಿಟಲ್ ಅರೆಸ್ಟ್: "ಡಿಜಿಟಲ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ. ಇಂತಹ ತನಿಖೆಗಳಿಗೆ ಯಾವುದೇ ತನಿಖಾ ಸಂಸ್ಥೆಯು ಫೋನ್ ಅಥವಾ ವೀಡಿಯೊ ಕರೆ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ ಎಂದರು.

ರಾಷ್ಟ್ರೀಯ ಸೈಬರ್ ಸಹಾಯವಾಣಿಯೊಂದಿಗೆ ಸಂಪರ್ಕ ಸಾಧಿಸಲು ಅಥವಾ ಅದರ ಪೋರ್ಟಲ್‌ನೊಂದಿಗೆ ಸಂಪರ್ಕ ಸಾಧಿಸಲು 1930 ನಂಬರ್ ಡಯಲ್ ಮಾಡಲು ಮತ್ತು ಅಂತಹ ಅಪರಾಧದ ಬಗ್ಗೆ ಪೊಲೀಸರಿಗೆ ತಿಳಿಸಿ. ಇಂತಹ ಕರೆಗಳು ಬಂದಾಗ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ದೂರು ನೀಡಿ ಎಂದರು.

ಪ್ರಧಾನ ಮಂತ್ರಿಗಳು ಎನಿಮೇಷನ್ ಜಗತ್ತಿನಲ್ಲಿ ಭಾರತೀಯ ಪ್ರತಿಭೆಗಳು ಹೆಚ್ಚುತ್ತಿರುವ ಬಗ್ಗೆ ಶ್ಲಾಘಿಸಿದರು. ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಅನಿಮೇಷನ್ ಜಗತ್ತಿನಲ್ಲಿ 'ಮೇಡ್ ಇನ್ ಇಂಡಿಯಾ' ಮತ್ತು 'ಮೇಡ್ ಬೈ ಇಂಡಿಯಾ' ಪ್ರಕಾಶಮಾನವಾಗಿ ಮಿಂಚುತ್ತಿವೆ ಎಂದರು.

PM Modi in Mann Ki Baat
ಸೆಮಿಕಂಡಕ್ಟರ್ ಡಿಜಿಟಲ್ ಯುಗದ ಆಧಾರವಾಗಿದೆ: ಪ್ರಧಾನಿ ಮೋದಿ

ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪತ್ಲು ಮುಂತಾದ ಭಾರತೀಯ ಅನಿಮೇಷನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ಭಾರತದ ವಿಷಯ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಜಗತ್ತಿನಾದ್ಯಂತ ಇಷ್ಟಪಡಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತವು ಅನಿಮೇಷನ್‌ನಲ್ಲಿ ಕ್ರಾಂತಿಯನ್ನು ಸೃಷ್ಟಿಸುವ ಹಾದಿಯಲ್ಲಿದೆ. ಭಾರತೀಯ ಆಟಗಳು ಕೂಡ ಜನಪ್ರಿಯವಾಗುತ್ತಿವೆ ಎಂದು ಮೋದಿ ಹೇಳಿದರು.

'ಆತ್ಮನಿರ್ಭರ ಭಾರತ'ದ ಪ್ರಯತ್ನವು ಪ್ರತಿಯೊಂದು ವಲಯದಲ್ಲೂ ದಾಪುಗಾಲು ಹಾಕುತ್ತಿದೆ, ದೇಶವು ತನ್ನ ರಕ್ಷಣಾ ಉತ್ಪನ್ನಗಳನ್ನು ಈಗ 85 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com