ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಕರೆ: Z ಭದ್ರತೆ ಒದಗಿಸುವಂತೆ ಅಮಿತ್ ಶಾಗೆ ಬಿಹಾರ ಸಂಸದ ಪಪ್ಪು ಯಾದವ್ ಆಗ್ರಹ!

ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಬಿಷ್ಣೋಯ್ ಗ್ಯಾಂಗ್ ನಿಂದ ಬಂದಿರುವ ಬೆದರಿಕೆಯನ್ನೂ ಉಲ್ಲೇಖಿಸಿದ್ದಾರೆ.
Pappu Yadav-Lawrence Bishnoi
ಪಪ್ಪು ಯಾದವ್-ಲಾರೆನ್ಸ್ ಬಿಷ್ಣೋಯ್TNIE
Updated on

ಬಿಹಾರದ ಪುರ್ನಿಯಾ ಸಂಸದ ಪಪ್ಪು ಯಾದವ್ ಅವರ ತಮ್ಮ ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ವಾಸ್ತವವಾಗಿ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ನಂತರ, ಈಗ ಪಪ್ಪು ಯಾದವ್ ಆತಂಕಗೊಂಡಿದ್ದು ತಮ್ಮ ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಬಿಷ್ಣೋಯ್ ಗ್ಯಾಂಗ್ ನಿಂದ ಬಂದಿರುವ ಬೆದರಿಕೆಯನ್ನೂ ಉಲ್ಲೇಖಿಸಿದ್ದಾರೆ. ಪಪ್ಪು ಯಾದವ್ ಅವರು ತಮ್ಮ ಪತ್ರದಲ್ಲಿ ಪ್ರಸ್ತುತ ಅವರಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗುತ್ತಿದೆ. ಆದರೆ ಬೆದರಿಕೆಗಳಿಂದಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ನನ್ನ ಭದ್ರತೆಯನ್ನು ಹೆಚ್ಚಿಸದಿದ್ದರೆ, ನಾನು ಯಾವಾಗ ಬೇಕಾದರೂ ಕೊಲೆಯಾಗಬಹುದು. ಪಪ್ಪು ಯಾದವ್ ಅವರಿಗೆ ಝಡ್ ಕೆಟಗರಿ ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ.

ಪ್ರಸ್ತುತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿರಂತರವಾಗಿ ದೇಶದಲ್ಲಿ ಅಹಿತರ ಘಟನೆಗಳನ್ನು ಸೃಷ್ಟಿಸುತ್ತಿದೆ. ರಾಜಕೀಯ ವ್ಯಕ್ತಿಯಾಗಿರುವ ನಾನು ಘಟನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದೇನೆ. ನಾನು ಪ್ರತಿಭಟಿಸಿದರೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮುಖ್ಯಸ್ಥ ನನಗೆ ಮೊಬೈಲ್‌ ಕರೆ ಮೂಲಕ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇಂತಹ ಗಂಭೀರ ಪ್ರಾಣ ಬೆದರಿಕೆಯನ್ನು ನೀಡಿದ್ದರೂ, ಬಿಹಾರ ಮತ್ತು ಕೇಂದ್ರ ಗೃಹ ಸಚಿವಾಲಯ ನನ್ನ ಸುರಕ್ಷತೆಯ ಬಗ್ಗೆ ನಿಷ್ಕ್ರಿಯವಾಗಿದೆ. ನನ್ನ ಹತ್ಯೆಯ ನಂತರವೇ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸಂತಾಪ ಸೂಚಿಸಲು ಜನ ಕ್ರಿಯಾಶೀಲರಾಗುತ್ತಾರೆ ಎಂದು ತೋರುತ್ತದೆ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ರನ್ನು ಪಪ್ಪು ಯಾದವ್ ಭೇಟಿಯಾದ ನಂತರ ಇದೀಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂಸದರಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ಪಪ್ಪು ಯಾದವ್ ಆಡಿಯೋವನ್ನು ಹಂಚಿಕೊಂಡಿದ್ದಾರೆ. ಕರೆ ಮಾಡಿದವರು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ತನಗೆ ಬೆದರಿಕೆಯೊಡ್ಡಿದ ವ್ಯಕ್ತಿ ತನ್ನ ಮೇಲೂ ಮರುಪ್ರಶ್ನೆ ಮಾಡಿದ್ದ ಎಂದು ಪಪ್ಪು ಯಾದವ್ ಹೇಳಿದ್ದು, ಕರೆ ಮಾಡಿದವರು ಸಂಸದರ ವಿವಿಧ ವಿಳಾಸಗಳ ಬಗ್ಗೆ ಮಾಹಿತಿ ನೀಡಿದ್ದು, ಪೂರ್ಣಿಯಾದಲ್ಲಿ ಅವರು ಹೇಗೆ ಹೊರಬರುತ್ತಾರೆ ಎಂಬುದನ್ನು ನೋಡುತ್ತೇವೆ ಎಂದು ಹೇಳಿದ್ದಾರೆ.

Pappu Yadav-Lawrence Bishnoi
ಪೊಲೀಸ್ ಕಸ್ಟಡಿಯಲ್ಲಿದ್ದ ಲಾರೆನ್ಸ್ ಬಿಷ್ಣೋಯ್ ಟಿವಿ ಸಂದರ್ಶನ: ಇಬ್ಬರು ಡಿಎಸ್ಪಿ ಸೇರಿ ಏಳು ಪೊಲೀಸ್ ಅಧಿಕಾರಿಗಳ ಅಮಾನತು

ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಸಂಸದ ಪಪ್ಪು ಯಾದವ್ ಅವರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಸಂಸದರಿಗೆ ಬೆದರಿಕೆ ಹಾಕಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಪೂರ್ಣಿಯಾದಲ್ಲಿ ಎಸ್ಪಿ ಕಾರ್ತಿಕೇಯ ಕೆ ಶರ್ಮಾ ತಿಳಿಸಿದ್ದಾರೆ. ಅದರಂತೆ ಸ್ಥಳೀಯ ಮಟ್ಟದಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಇದಾದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆ ನಂತರ ವರದಿ ನೀಡಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com