ಜನಗಣತಿ ಜಾತಿಗಳ ಎಣಿಕೆ ಒಳಗೊಂಡಿರುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ವಪಕ್ಷ ಸಭೆ ಕರೆಯಬೇಕು: ಕಾಂಗ್ರೆಸ್

ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಅಧಿಕಾರಾವಧಿಯನ್ನು ವಿಸ್ತರಿಸಲು ಸೂಚನೆ ನೀಡಲಾಗಿದೆ ಮತ್ತು 2021 ರಲ್ಲಿ ನಡೆಯಬೇಕಿದ್ದ ದೀರ್ಘಾವಧಿಯ ಜನಗಣತಿಯನ್ನು ಅಂತಿಮವಾಗಿ ಶೀಘ್ರದಲ್ಲೇ ನಡೆಸಲು ಮೋದಿ ಸರ್ಕಾರ ಮುಂದಾಗಿದೆ.
ಜೈರಾಮ್ ರಮೇಶ್
ಜೈರಾಮ್ ರಮೇಶ್
Updated on

ನವದೆಹಲಿ: ಮುಂದಿನ ಜನಗಣತಿಯು ಎಲ್ಲಾ ಜಾತಿಗಳ ವಿವರವಾದ ಎಣಿಕೆಯನ್ನು ಒಳಗೊಂಡಿರುತ್ತದೆಯೇ ಮತ್ತು ಲೋಕಸಭೆಯಲ್ಲಿ ಪ್ರತಿ ರಾಜ್ಯದ ಬಲವನ್ನು ನಿರ್ಧರಿಸಲು ಜನಗಣತಿ ಬಳಸಲಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದು ಕಾಂಗ್ರೆಸ್ ಸೋಮವಾರ ಒತ್ತಾಯಿಸಿದೆ.

ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಅಧಿಕಾರಾವಧಿಯನ್ನು ವಿಸ್ತರಿಸಲು ಸೂಚನೆ ನೀಡಲಾಗಿದೆ ಮತ್ತು 2021 ರಲ್ಲಿ ನಡೆಯಬೇಕಿದ್ದ ದೀರ್ಘಾವಧಿಯ ಜನಗಣತಿಯನ್ನು ಅಂತಿಮವಾಗಿ ಶೀಘ್ರದಲ್ಲೇ ನಡೆಸಲು ಮೋದಿ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು ಹೇಳಿದ್ದಾರೆ.

"ಆದರೆ ಎರಡು ನಿರ್ಣಾಯಕ ವಿಷಯಗಳ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಈ ಹೊಸ ಜನಗಣತಿಯು 1951 ರಿಂದ ಪ್ರತಿ ಜನಗಣತಿಯಲ್ಲಿ ಮಾಡಲಾದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜೊತೆಗೆ ದೇಶದ ಎಲ್ಲಾ ಜಾತಿಗಳ ವಿವರವಾದ ಎಣಿಕೆಯನ್ನು ಒಳಗೊಂಡಿರುತ್ತದೆಯೇ? ಸಂವಿಧಾನದ ಪ್ರಕಾರ, ಅಂತಹ ಜಾತಿ ಗಣತಿ ನಡೆಸುವುದು ಕೇಂದ್ರ ಸರ್ಕಾರದ ಸಂಪೂರ್ಣ ಜವಾಬ್ದಾರಿಯಾಗಿದೆ" ಎಂದು ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜೈರಾಮ್ ರಮೇಶ್
ಕೇಂದ್ರದಿಂದ 2025ಕ್ಕೆ ಜನಗಣತಿ ಸಾಧ್ಯತೆ; 2028 ಕ್ಕೆ ಲೋಕಸಭೆ ಡಿಲಿಮಿಟೇಶನ್ ಗುರಿ!

"ಭಾರತದ ಸಂವಿಧಾನದ 82ನೇ ವಿಧಿಯಲ್ಲಿ ಉಲ್ಲೇಖಿಸಿದಂತೆ ಲೋಕಸಭೆಯಲ್ಲಿ ಪ್ರತಿ ರಾಜ್ಯದ ಬಲವನ್ನು ನಿರ್ಧರಿಸಲು ಈ ಜನಗಣತಿಯನ್ನು ಬಳಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಈ ಎರಡು ಪ್ರಮುಖ ವಿಷಯಗಳ ಬಗ್ಗೆ ಸ್ಪಷ್ಟನೆ ಪಡೆಯಲು ಶೀಘ್ರವೇ ಸರ್ವಪಕ್ಷ ಸಭೆ ನಡೆಸಿದರೆ ಸೂಕ್ತ ಎಂದು ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.

ಪ್ರಸ್ತುತ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಮೃತುಂಜಯ್ ಕುಮಾರ್ ನಾರಾಯಣ್ ಅವರ ಅವಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 2026 ರವರೆಗೆ ವಿಸ್ತರಿಸಿದೆ. ಇದು ಅತಿ ಹೆಚ್ಚು ವಿಳಂಬವಾದ ದಶಮಾನದ ಜನಗಣತಿಯನ್ನು ಕೈಗೊಳ್ಳಲು ತಂಡವನ್ನು ಮುನ್ನಡೆಸಲು ಅವರಿಗೆ ದಾರಿ ಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com