
ನವದೆಹಲಿ: ಪ್ರಸ್ತಾವಿತ ವಕ್ಫ್(ತಿದ್ದುಪಡಿ) ಮಸೂದೆ, 2024ಕ್ಕೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಉತ್ತರಾಖಂಡ ವಕ್ಫ್ ಮಂಡಳಿಯು ಸಂಪೂರ್ಣ ಬೆಂಬಲ ಘೋಷಿಸಿದೆ.
ಪಂಜಾಬ್ ವಕ್ಫ್ ಬೋರ್ಡ್, ಹರಿಯಾಣ ವಕ್ಫ್ ಬೋರ್ಡ್ ಮತ್ತು ಉತ್ತರಾಖಂಡ್ ವಕ್ಫ್ ಬೋರ್ಡ್ ಸೇರಿದಂತೆ ಹಲವಾರು ರಾಜ್ಯ ವಕ್ಫ್ ಮಂಡಳಿಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಜೆಪಿಸಿಗೆ ಸಲ್ಲಿಸಲು ಸಭೆಯಲ್ಲಿ ಭಾಗವಹಿಸಿದ್ದವು.
ಮೂಲಗಳ ಪ್ರಕಾರ, ಉತ್ತರಾಖಂಡ ವಕ್ಫ್ ಮಂಡಳಿಯ ಪ್ರತಿನಿಧಿಗಳು ಸಮಿತಿಗೆ, ವಿಶಿಷ್ಟವಾದ ವಿನಂತಿಯನ್ನು ಮಾಡಿದ್ದು, ವಕ್ಫ್ ಆಸ್ತಿಗಳಿಂದ ಕೆಲವು ಪ್ರಯೋಜನಗಳನ್ನು ಸೈನಿಕರಿಗೆ ಅಥವಾ ಅವರ ಕುಟುಂಬಗಳಿಗೆ ಹಂಚಿಕೆ ಮಾಡಲು ಕಾನೂನಿನಲ್ಲಿ ಅವಕಾಶ ನೀಡಬೇಕು ಎಂದು ಸಲಹೆ ನೀಡಿದೆ.
ಒಬ್ಬ ಸೈನಿಕನು ರಾಷ್ಟ್ರಕ್ಕಾಗಿ ಹೋರಾಡುವಾಗ, ಅವರು ಹಿಂದೂ, ಮುಸ್ಲಿಂ ಅಥವಾ ಇತರ ಯಾವುದೇ ಧರ್ಮಕ್ಕೆ ಸೇರಿರುವುದಿಲ್ಲ. ಅವರು ಒಬ್ಬ ದೇಶಭಕ್ತರಾಗಿ ಕೆಲಸ ಮಾಡುತ್ತಾರೆ ಎಂದು ಉತ್ತರಾಖಂಡ ವಕ್ಫ್ ಮಂಡಳಿ ಹೇಳಿದೆ. ಅಲ್ಲದೆ ಪ್ರಸ್ತಾವಿತ ವಕ್ಫ್(ತಿದ್ದುಪಡಿ) ಮಸೂದೆ 2024ಕ್ಕೆ ಬೆಂಬಲಿಸಿದೆ.
ಉತ್ತರಾಖಂಡದ ಈ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಹಲವು ಸಂಸದರಿಂದ ವಿರೋಧ ವ್ಯಕ್ತವಾಗಿದೆ.
ವಕ್ಫ್ ತಿದ್ದುಪಡಿ ಕಾಯ್ದೆ, 2024ರ ಕುರಿತು ತಮ್ಮ ಮೌಖಿಕ ಪುರಾವೆಗಳನ್ನು ದಾಖಲಿಸಿಕೊಳ್ಳಲು ದೆಹಲಿ ವಕ್ಫ್ ಮಂಡಳಿ, ಹರ್ಯಾಣ ವಕ್ಫ್ ಮಂಡಳಿ, ಪಂಜಾಬ್ ವಕ್ಫ್ ಮಂಡಳಿ ಹಾಗೂ ಉತ್ತರಾಖಂಡ ವಕ್ಫ್ ಮಂಡಳಿಯ ಪ್ರತಿನಿಧಿಗಳನ್ನು ಜಂಟಿ ಸಂಸದೀಯ ಸಮಿತಿ ಸೋಮವಾರ ಸಭೆಗೆ ಆಹ್ವಾನಿಸಿತ್ತು.
Advertisement