ಅದಾನಿ ಸಮೂಹ, ಪ್ರಮುಖ ನಿಯಂತ್ರಕ ಸಂಸ್ಥೆಗಳು, ಬಿಜೆಪಿ ನಡುವೆ 'ಅಪಾಯಕಾರಿ ನಂಟು': ಕಾಂಗ್ರೆಸ್ ಆರೋಪ

ಸ್ಟಾಕ್ ಮಾರ್ಕೆಟ್ ರೆಗ್ಯುಲೇಟರ್‌ನ ತಪಾಸಣೆಯಲ್ಲಿರುವ ಇಂಡಿಯಾಬುಲ್ಸ್ ಗ್ರೂಪ್‌ಗೆ ಸಂಪರ್ಕ ಹೊಂದಿದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಕಂಪನಿಗೆ ಬುಚ್ ತನ್ನ ಆಸ್ತಿಯನ್ನು ಬಾಡಿಗೆಗೆ ನೀಡಿದ್ದಾರೆ ಎಂದು ಸಹ ಕಾಂಗ್ರೆಸ್ ಆರೋಪಿಸಿದೆ.
Congress leader Pawan Khera addresse a press conference on issue of alleged SEBI scam, at AICC in New Delhi, Tuesday, Oct. 29, 2024.
ದೆಹಲಿಯಲ್ಲಿ ಸೆಬಿ ಹಗರಣದ ವಿಷಯದ ಕುರಿತು ಕಾಂಗ್ರೆಸ್ ನಾಯಕ ಪವನ್ ಖೇರಾ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
Updated on

ನವದೆಹಲಿ: ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರನ್ನು ರಕ್ಷಿಸಲು ಅದಾನಿ ಗ್ರೂಪ್, ಪ್ರಮುಖ ನಿಯಂತ್ರಕ ಸಂಸ್ಥೆಗಳು ಮತ್ತು ಬಿಜೆಪಿ ಮಧ್ಯೆ ಅಪಾಯಕಾರಿ ನಂಟು ಇದ್ದು ಏಕಸ್ವಾಮ್ಯ ಬಚಾವೋ ಸಿಂಡಿಕೇಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೊಸ ಆರೋಪ ಮಾಡಿದೆ.

ಸ್ಟಾಕ್ ಮಾರ್ಕೆಟ್ ರೆಗ್ಯುಲೇಟರ್‌ನ ಪರಿಶೀಲನೆಯಲ್ಲಿರುವ ಇಂಡಿಯಾಬುಲ್ಸ್ ಗ್ರೂಪ್‌ಗೆ ಸಂಪರ್ಕ ಹೊಂದಿದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಕಂಪನಿಗೆ ಬುಚ್ ತನ್ನ ಆಸ್ತಿಯನ್ನು ಬಾಡಿಗೆಗೆ ನೀಡಿದ್ದಾರೆ ಎಂದು ಸಹ ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್ ನ ಇಂದಿನ ಈ ಹೊಸ ಆರೋಪಗಳ ಬಗ್ಗೆ ಬುಚ್ ಅಥವಾ ಅದಾನಿ ಗ್ರೂಪ್ ಕಡೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿಂದೆ ಮಾತ್ರ ಸೆಬಿ ಮುಖ್ಯಸ್ಥರು ಮತ್ತು ಅದಾನಿ ಸಮೂಹವು ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ್ದವು.

Congress leader Pawan Khera addresse a press conference on issue of alleged SEBI scam, at AICC in New Delhi, Tuesday, Oct. 29, 2024.
SEBI ಅಧ್ಯಕ್ಷೆ ಮಾಧವಿ ಪುರಿ ಬುಚ್ ಗೈರು: PAC ಸಭೆ ಮುಂದೂಡಿದ ಕೆಸಿ ವೇಣುಗೋಪಾಲ್

ಬುಚ್ ಅವರು ಪ್ರಿಡಿಬಲ್ ಹೆಲ್ತ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸಂಬಂಧ ಹೊಂದಿದ್ದು, ಅದರಲ್ಲಿ ಈಕ್ವಿಟಿಯನ್ನು ಹೊಂದಿದ್ದಾರೆ. ಅವರು ಸೆಬಿಯ ಸಂಪೂರ್ಣ ಸದಸ್ಯರಾದ ನಂತರವೂ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದರು ಎಂದು ವಿರೋಧ ಪಕ್ಷವು ಆರೋಪಿಸಿದೆ.

ಸೇಂಟ್ ವಿನ್ಸೆಂಟ್ ಮತ್ತು ದಿ ಗ್ರೆನಡೈನ್ಸ್‌ನಿಂದ ಹೊರಗಿರುವ ಮತ್ತು ಪ್ರಿಡಿಬಲ್ ಹೆಲ್ತ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿರುವ ಜೆಸೆಸಾ ಇನ್ವೆಸ್ಟ್ ಮೆಂಟ್ ಲಿಮಿಟೆಡ್, ಐಸಿಐಜೆ ಹಂಚಿಕೊಂಡ ವಿಷಯ ಪ್ರಕಾರ ಪ್ಯಾರಡೈಸ್ ಪೇಪರ್ಸ್‌ನಿಂದ ಮಾಹಿತಿ ಸೋರಿಕೆಯಾಗಿದೆ ಎಂದು ಲಿಸ್ಟ್ ಮಾಡಲಾಗಿದೆ ಎಂಬುದಾಗಿ ಹೇಳಿದೆ.

ಇಂದು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಅಕ್ಟೋಬರ್ 10, 2022 ರಂದು ಸೆಬಿಯಲ್ಲಿ ಪೂರ್ಣ ಸಮಯದ ಸದಸ್ಯರಾದ ಅನಂತ್ ನಾರಾಯಣ ಗೋಪಾಲಕೃಷ್ಣನ್ ಅವರು ಮುಂಬೈನಲ್ಲಿರುವ ತಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಿದ್ದು, ಅದು ಸೆಬಿಯಿಂದ ನಿಯಂತ್ರಿಸಲ್ಪಡುವ ಐಎಂಸಿ ಇಂಡಿಯಾ ಸೆಕ್ಯುರಿಟೀಸ್ ಎಂಬ ಬ್ರೋಕರೇಜ್ ಸಂಸ್ಥೆಯಾಗಿದ್ದು, 64.8 ಲಕ್ಷ ರೂ ಬಾಡಿಗೆಯನ್ನು ಪಡೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಮೂರನೇ ವಿಡಿಯೊ ಬಿಡುಗಡೆ ಮಾಡಿದ ಅವರು, ಅದರಲ್ಲಿ ಅದಾನಿ ಡಿಫೆನ್ಸ್ ವೆಬ್‌ಸೈಟ್ ಹೇಗೆ ವಿದೇಶಿ "ರೀಬ್ರಾಂಡ್" ಮಾಡುವ ಮೂಲಕ ಕಂಪನಿಯು ಲಾಭ ಗಳಿಸುತ್ತದೆ ಎಂಬುದನ್ನು ವಿಡಿಯೋ ಮೂಲಕ ತೋರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com