ಹರ್ಯಾಣ: ಹರ್ಯಾಣ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಅಲ್ಲಿನ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ.
ಹರ್ಯಾಣದ್ಲಲಿ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷದೊಂದಿಗೆ ಮತ್ರಿ ಮಾಡಿಕೊಳ್ಳಲು ಚಿಂತನೆ ನಡೆಸುತ್ತಿರುವ ಕಾಂಗ್ರೆಸ್ ಗೆ ಈಗ ಗೊಂದಲ ಆರಂಭವಾಗಿದೆ.
ಆಮ್ ಆದ್ಮಿ ಪಕ್ಷ ಮೈತ್ರಿಗೆ ಮುಂದಾದರೆ 20 ಸ್ಥಾನಗಳನ್ನು ತನಗೆ ಬಿಟ್ಟುಕೊಡಬೇಕೆಂಬ ಬೇಡಿಕೆ ಮುಂದಿಟ್ಟಿರುವುದು ಈ ಗೊಂದಲಕ್ಕೆ ಕಾರಣ. ಕಾಂಗ್ರೆಸ್ ಸಿಇಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ಕಾಂಗ್ರೆಸ್‌ಗೆ ಸಿಇಸಿ ಸಭೆಗೆ ಮಿತ್ರಪಕ್ಷಗಳ ಆಕಾಂಕ್ಷೆಗಳನ್ನು ಪಕ್ಷದ ಸ್ವಂತ ಕಾರ್ಯತಂತ್ರದ ಹಿತಾಸಕ್ತಿಗಳೊಂದಿಗೆ ಸಮತೋಲನಗೊಳಿಸುವುದು ಸವಾಲಿನ ಸಂಗತಿಯಾಗಿದೆ.
ಕಾಂಗ್ರೆಸ್ ಬಿಜೆಪಿ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಯತ್ನಿಸುತ್ತಿದ್ದು, ಈ ಬಾರಿ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ. ಆದರೆ ಕಾಂಗ್ರೆಸ್- ಆಮ್ ಆದ್ಮಿ ಪಕ್ಷ ಮೈತ್ರಿಗೆ ಮುಂದಾದಲ್ಲಿ, ಆಮ್ ಆದ್ಮಿ ಪಕ್ಷಕ್ಕೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕೆಂಬುದು ಕಾಂಗ್ರೆಸ್ ನ ಗೊಂದಲಕ್ಕೆ ಕಾರಣವಾಗಿರುವ ಅಂಶವಾಗಿದೆ.
ಮೂಲಗಳ ಪ್ರಕಾರ, ಎಎಪಿ 20 ಸ್ಥಾನಗಳ ಬೇಡಿಕೆಯನ್ನು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅದರ ಕಾರ್ಯಕ್ಷಮತೆಯನ್ನು ಆಧರಿಸಿ ಮುಂದಿಟ್ಟಿದೆ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಒಂದು ಸ್ಥಾನವನ್ನು ಆಮ್ ಆದ್ಮಿ ಪಕ್ಷ ಗೆದ್ದಿದೆ. ಇದು ವಿಧಾನಸಭಾ ಸ್ಥಾನಗಳ ಸ್ಥಾನ ಹಂಚಿಕೆಯ ಅನುಪಾತದ ಪಾಲನ್ನು ಪಡೆಯಲು ಅರ್ಹತೆಯಾಗಿದೆ ಎಂಬುದು AAP ವಾದವಾಗಿದೆ. ಆದರೆ ಆಮ್ ಆದ್ಮಿ ಪಕ್ಷ ಕೇಳಿದಷ್ಟು ಸ್ಥಾನಗಳನ್ನು ಬಿಟ್ಟುಕೊಡುವುದಕ್ಕೆ ಕಾಂಗ್ರೆಸ್ ರಾಜ್ಯ ಘಟಕವು ಹಿಂಜರಿಯುತ್ತಿದೆ.
ಎರಡೂ ಪಕ್ಷಗಳು ಸದಸ್ಯರಾಗಿರುವ ಇಂಡಿಯಾ ಬ್ಲಾಕ್ ಸ್ಥಳೀಯ ವ್ಯವಸ್ಥೆಗಿಂತ ಹೆಚ್ಚಾಗಿ ರಾಷ್ಟ್ರೀಯ ಒಕ್ಕೂಟವಾಗಿದೆ ಎಂಬುದು ಕಾಂಗ್ರೆಸ್ ನ ವಾದವಾಗಿದೆ.
ಈ ಸವಾಲುಗಳ ಹೊರತಾಗಿಯೂ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕತ್ವ ಎಎಪಿಯೊಂದಿಗಿನ ಮೈತ್ರಿಗೆ ಮುಕ್ತವಾಗಿದೆ. 90 ವಿಧಾನಸಭಾ ಕ್ಷೇತ್ರಗಳಿರುವ ಹರ್ಯಾಣದಲ್ಲಿ ಅ.05 ರಂದು ಚುನಾವಣೆ ನಡೆಯಲಿದ್ದು ಅ.08 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
Advertisement