ಪುಣೆ: ಮುಂಬೈ-ಬೆಂಗಳೂರು ಹೆದ್ದಾರಿಯ ವಾರ್ಜೆ ಮೇಲ್ಸೇತುವೆಯಲ್ಲಿ ಸರಣಿ ಅಪಘಾತ; ಹತ್ತಕ್ಕೂ ಹೆಚ್ಚು ವಾಹನಗಳಿಗೆ ಹಾನಿ
ವಾರ್ಜೆ: ಪುಣೆಯ ವಾರ್ಜೆ ಸೇತುವೆ ಮೇಲೆ ನಿನ್ನೆ ಸೋಮವಾರ ಸಾಯಂಕಾಲ ಹತ್ತು ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.
ಮುಂಬೈ-ಬೆಂಗಳೂರು ಹೆದ್ದಾರಿಯ ಕಟ್ರಾಜ್ ದೆಹು ರಸ್ತೆಯ ಬೈಪಾಸ್ ನಲ್ಲಿ ಹೈದರಾಬಾದ್ ಬಿರಿಯಾನಿ ಎದುರುಗಡೆ ಈ ನಿನ್ನೆ ಸಂಜೆ 7.30ರ ಹೊತ್ತಿಗೆ ಸರಣಿ ಅಪಘಾತ ಸಂಭವಿಸಿದೆ. ಯಾವುದೇ ಸಾವು ಸಂಭವಿಸಿಲ್ಲವಾದರೂ ಕೂಡ ಹಲವು ವಾಹನಗಳು ಹಾನಿಗೀಡಾಗಿವೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಟಾಟಾ ವಾಹನ ನಿಯಂತ್ರಣ ಕಳೆದುಕೊಂಡು ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಒಂದರ ಮೇಲೊಂದರಂತೆ ಸರಣಿ ಡಿಕ್ಕಿ ಸಂಭವಿಸಿದೆ. ಅಪಘಾತ ಸಂಭವಿಸಿದ ನಂತರ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆ ತಡವಾಗಿ ವಾಹನಗಳು ಚಲಿಸಿದ್ದು,ಸ್ಥಳೀಯ ಸಂಚಾರಿ ಪೊಲೀಸರು ಬಂದು ವಾಹನ ತೆರವುಗೊಳಿಸಿದ್ದಾರೆ.
ವಾರ್ಜೆ ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯನ್ನು ತೆರವುಗೊಳಿಸಿ ಅಪಘಾತಕ್ಕೀಡಾದ ವಾಹನಗಳನ್ನು ಅಲ್ಲಿಂದ ಬೇರೆಡೆಗೆ ತೆರವುಗೊಳಿಸಿದ್ದಾರೆ.
ವಾರ್ಜೆ ಸೇತುವೆ ಕಿರಿದಾಗಿದ್ದು ಹೆದ್ದಾರಿಯಲ್ಲಿ ಸಾಕಷ್ಟು ಹೊಂಡ ಗುಂಡಿಗಳಿವೆ. ಇದರಿಂದಾಗಿ ಇಲ್ಲಿ ಪದೇ ಪದೇ ಅಪಘಾತಗಳು ಆಗುತ್ತಿರುತ್ತವೆ.