ಹರಿಯಾಣ: ಬಿಜೆಪಿಗೆ ಬಂಡಾಯದ ಬಿಸಿ; ಟಿಕೆಟ್ ವಂಚಿತ ಸಚಿವ ರಂಜಿತ್ ಚೌತಾಲಾ, ಶಾಸಕ ಲಕ್ಷ್ಮಣ್ ನಾಪಾ ರಾಜೀನಾಮೆ

ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಪುತ್ರ ಇಂಧನ ಮತ್ತು ಬಂಧಿಖಾನೆ ಸಚಿವ ರಂಜಿತ್ ಚೌತಾಲಾ(79) ಅವರು ತಮ್ಮ ಬೆಂಬಲಿಗರೊಂದಿಗಿನ ಸಭೆಯ ನಂತರ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಲಕ್ಷ್ಮಣ್ ನಾಪಾ - ರಂಜಿತ್ ಚೌತಾಲಾ
ಲಕ್ಷ್ಮಣ್ ನಾಪಾ - ರಂಜಿತ್ ಚೌತಾಲಾ
Updated on

ಚಂಡೀಗಢ: ಅಕ್ಟೋಬರ್ 5 ರಂದು ನಡೆಯುವ ಹರಿಯಾಣ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ 67 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಒಂದು ದಿನದ ನಂತರ, ಟಿಕೆಟ್ ವಂಚಿತ ಸಚಿವ ರಂಜಿತ್ ಸಿಂಗ್ ಚೌಟಾಲಾ ಮತ್ತು ಶಾಸಕ ಲಕ್ಷ್ಮಣ್ ದಾಸ್ ನಾಪಾ ಅವರು ಗುರುವಾರ ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಪುತ್ರ ಇಂಧನ ಮತ್ತು ಬಂಧಿಖಾನೆ ಸಚಿವ ರಂಜಿತ್ ಚೌತಾಲಾ(79) ಅವರು ತಮ್ಮ ಬೆಂಬಲಿಗರೊಂದಿಗಿನ ಸಭೆಯ ನಂತರ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.

ನಾಪಾ ಅವರು ಟಿಕೆಟ್ ನಿರಾಕರಿಸಿದ ನಂತರ ಪಕ್ಷವನ್ನು ತೊರೆದರೆ, ಮಾಜಿ ಸಚಿವ ಕರಣ್ ದೇವ್ ಕಾಂಬೋಜ್ ಅವರು ತಮ್ಮನ್ನು ಪಕ್ಷ ಕಡೆಗಣಿಸಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲಕ್ಷ್ಮಣ್ ನಾಪಾ - ರಂಜಿತ್ ಚೌತಾಲಾ
ಹರಿಯಾಣ ಅಸೆಂಬ್ಲಿ ಚುನಾವಣೆ: ರಾಹುಲ್ ಭೇಟಿಯಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್; ಕಾಂಗ್ರೆಸ್ ನಿಂದ ಸ್ಪರ್ಧೆ ಸಾಧ್ಯತೆ!

ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ನಾಪಾ ಅವರು ಪಕ್ಷವನ್ನು ತೊರೆದ ನಂತರ, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ರಾಷ್ಟ್ರ ರಾಜಧಾನಿಯ ಅವರ ನಿವಾಸದಲ್ಲಿ ಭೇಟಿಯಾದರು ಮತ್ತು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರುವುದಾಗಿ ಹೇಳಿದ್ದಾರೆ.

ಈ ಮಧ್ಯೆ, ಸಿರ್ಸಾ ಜಿಲ್ಲೆಯ ರಾನಿಯಾ ಸೆಗ್ಮೆಂಟ್‌ನಿಂದ ಟಿಕೆಟ್ ನಿರಾಕರಿಸಿದ ನಂತರ ರಂಜಿತ್ ಚೌತಾಲಾ ಅವರು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ.

ನನ್ನ ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ನಾನು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com