ಅಮೆರಿಕದಲ್ಲಿ ತಮಿಳು ನಾಡು ಸಿಎಂ ಸೈಕ್ಲಿಂಗ್: ರಾಹುಲ್ ಗಾಂಧಿ ಹೇಳಿದ್ದೇನು? ಸ್ಟಾಲಿನ್ ಪ್ರತಿಕ್ರಿಯೆ ನೋಡಿ...

ಎಂಕೆ ಸ್ಟಾಲಿನ್ ಅವರು ಅಮೆರಿಕದಲ್ಲಿ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎಂ ಕೆ ಸ್ಟಾಲಿನ್ ಮತ್ತು ರಾಹುಲ್ ಗಾಂಧಿ
ಎಂ ಕೆ ಸ್ಟಾಲಿನ್ ಮತ್ತು ರಾಹುಲ್ ಗಾಂಧಿ
Updated on

ಚೆನ್ನೈ: ಸದಾ ಬಿಳಿ ಪಂಚೆ ಬಿಳಿ ಶರ್ಟ್ ನಲ್ಲಿ ಇರುತ್ತಿದ್ದ ತಮಿಳು ನಾಡು ಸಿಎಂ ಎಂ ಕೆ ಸ್ಟಾಲಿನ್ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡು ಅಲ್ಲಿ ಸೂಟ್ ಬೂಟ್ ನಲ್ಲಿ ಮಿಂಚುತ್ತಿದ್ದಾರೆ. ಅದಷ್ಟೇ ಆದರೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ.

ಎಂಕೆ ಸ್ಟಾಲಿನ್ ಅವರು ಅಮೆರಿಕದಲ್ಲಿ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 25 ಸಾವಿರ ಲೈಕ್‌ಗಳು ಮತ್ತು ಸುಮಾರು ಸಾವಿರ ಕಮೆಂಟ್ ಗಳು ಬಂದಿವೆ.

ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸಹೋದರ, ನಾವು ಯಾವಾಗ ಚೆನ್ನೈನಲ್ಲಿ ಒಟ್ಟಿಗೆ ಸೈಕ್ಲಿಂಗ್ ಮಾಡೋಣ ಎಂದು ಕೇಳಿದ್ದಾರೆ.

ಇಂಡಿಯಾ ಬ್ಲಾಕ್ ಮೈತ್ರಿಯ ಭಾಗವಾಗಿರುವ ಸ್ಟಾಲಿನ್ ಅವರು ಅದಕ್ಕೆ ಆತ್ಮೀಯ ಸಹೋದರ, ನೀವು ಬಿಡುವಿರುವಾಗ, ನಾವು ಒಟ್ಟಿಗೆ ಸವಾರಿ ಮಾಡಿ ಚೆನ್ನೈನ ಹೃದಯವನ್ನು ಅನ್ವೇಷಿಸೋಣ!" ಎಂದು ಪ್ರತಿಕ್ರಿಯಿಸಿದ್ದಾರೆ.

ಸಿಎಂ ತಮ್ಮ ಕಡೆಯಿಂದ ಸಿಹಿತಿಂಡಿಗಳ ಬಾಕ್ಸ್ 'ಇನ್ನೂ ಬಾಕಿ ಇದೆ' ಎಂದು ಹೇಳಿದ್ದು, ರಾಹುಲ್ ಗಾಂಧಿಯವರನ್ನು "ರುಚಿಯಾದ ದಕ್ಷಿಣ ಭಾರತದ ಊಟ ಸವಿಯೋಣ ಬನ್ನಿ ಎಂದಿದ್ದಾರೆ.

"ನನ್ನ ಕಡೆಯಿಂದ ಸಿಹಿತಿಂಡಿಗಳ ಬಾಕ್ಸ್ ನಿಮಗೆ ಕೊಡಲು ಬಾಕಿ ಇದೆ. ನಮ್ಮ ಸೈಕ್ಲಿಂಗ್ ನಂತರ, ನನ್ನ ಮನೆಯಲ್ಲಿ ಸಿಹಿತಿಂಡಿಗಳೊಂದಿಗೆ ರುಚಿಕರವಾದ ದಕ್ಷಿಣ ಭಾರತೀಯ ಊಟವನ್ನು ಆನಂದಿಸೋಣ" ಎಂದು ಸ್ಟಾಲಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com