ಹಣಕಾಸು ಅಕ್ರಮ: ಆರ್ ಜಿ ಕರ್ ಮೆಡಿಕಲ್ ಕಾಲೇಜು ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್, ಸಹಚರರ ನಿವಾಸದ ಮೇಲೆ ED ದಾಳಿ

ಬೆಲಿಯಾಘಾಟಾದಲ್ಲಿನ ಸಂದೀಪ್ ಘೋಷ್ ಅವರ ನಿವಾಸ ಮತ್ತು ಹೌರಾ ಮತ್ತು ಸುಭಾಸ್ಗ್ರಾಮ್‌ನ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಈ ನಾಲ್ವರೂ ಈಗಾಗಲೇ ಸಿಬಿಐ ವಶದಲ್ಲಿದ್ದಾರೆ.
ಹಣಕಾಸು ಅಕ್ರಮ: ಆರ್ ಜಿ ಕರ್ ಮೆಡಿಕಲ್ ಕಾಲೇಜು ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್, ಸಹಚರರ ನಿವಾಸದ ಮೇಲೆ ED ದಾಳಿ
Updated on

ಕೋಲ್ಕತ್ತಾ: ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಅವರ ಮೂವರು ಸಹಚರರ ನಿವಾಸಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಬೆಲಿಯಾಘಾಟಾದಲ್ಲಿನ ಸಂದೀಪ್ ಘೋಷ್ ಅವರ ನಿವಾಸ ಮತ್ತು ಹೌರಾ ಮತ್ತು ಸುಭಾಸ್ಗ್ರಾಮ್‌ನ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಈ ನಾಲ್ವರೂ ಈಗಾಗಲೇ ಸಿಬಿಐ ವಶದಲ್ಲಿದ್ದಾರೆ.

ಇಂದು ಬೆಳಗ್ಗೆ 6. 15 ರ ಸುಮಾರಿಗೆ ದಾಳಿಯನ್ನು ಪ್ರಾರಂಭಿಸಿದ್ದೇವೆ ಎಂದು ಇಡಿ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇಡಿ ಅಧಿಕಾರಿಗಳು ಸಂದೀಪ್ ಘೋಷ್ ವಿರುದ್ಧ ಜಾರಿ ಪ್ರಕರಣದ ಮಾಹಿತಿ ವರದಿಯನ್ನು (ಇಸಿಐಆರ್) ದಾಖಲಿಸಿದ್ದಾರೆ, ಇದು ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಥಮ ಮಾಹಿತಿ ವರದಿ (FIR) ಗೆ ಹೋಲುತ್ತದೆ. ಆಗಸ್ಟ್ 23 ರಂದು, ಕೋಲ್ಕತ್ತಾ ಹೈಕೋರ್ಟ್ ವಿಶೇಷ ತನಿಖಾ ತಂಡದಿಂದ (SIT) ಸರ್ಕಾರಿ ಆಸ್ಪತ್ರೆಯಲ್ಲಿನ ಹಣಕಾಸಿನ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಆದೇಶಿಸಿತು.

ಈ ನಿರ್ಧಾರವು ಸೌಲಭ್ಯದ ಮಾಜಿ ಉಪ ಅಧೀಕ್ಷಕ ಡಾ.ಅಖ್ತರ್ ಅಲಿ ಅವರ ಮನವಿಯನ್ನು ಅನುಸರಿಸಿ, ಸಂದೀಪ್ ಘೋಷ್ ಅವರು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಹಣಕಾಸಿನ ದುರುಪಯೋಗದ ಅನೇಕ ಆರೋಪಗಳ ಬಗ್ಗೆ ಇಡಿ ತನಿಖೆಯನ್ನು ಕೋರಿದ್ದರು.

ಡಾ ಸಂದೀಪ್ ಘೋಷ್ ಫೆಬ್ರವರಿ 2021 ರಿಂದ ಸೆಪ್ಟೆಂಬರ್ 2023 ರವರೆಗೆ ಆರ್ ಜಿ ಕಾರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಅಕ್ಟೋಬರ್ 2023 ರಲ್ಲಿ ವರ್ಗಾಯಿಸಿ ಒಂದು ತಿಂಗಳೊಳಗೆ ಮತ್ತೆ ಅದೇ ಸ್ಥಾನಕ್ಕೆ ಕರತರಲಾಗಿತ್ತು.

ಸುಪ್ರೀಂ ಕೋರ್ಟ್ ಅರ್ಜಿ ವಜಾ: ಸಂಸ್ಥೆಯಲ್ಲಿ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಡಾ ಸಂದೀಪ್ ಘೋಷ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com