
ನವದೆಹಲಿ: ಕೇಂದ್ರ ಸರ್ಕಾರ ಈ ಮಾಸಾಂತ್ಯಕ್ಕೆ U-WIN ಪೋರ್ಟಲ್ ಪ್ರಾರಂಭಿಸಲಿದೆ. ಇದು ದೇಶದಲ್ಲಿನ ಮೂರು ಕೋಟಿಗೂ ಹೆಚ್ಚು ಗರ್ಭಿಣಿಯರು, ತಾಯಂದಿರು ಮತ್ತು ವಾರ್ಷಿಕವಾಗಿ ಜನಿಸಿದ ಸುಮಾರು 2.7 ಕೋಟಿ ಮಕ್ಕಳ ವ್ಯಾಕ್ಸಿನೇಷನ್ ಮತ್ತು ಔಷಧಿಗಳ ಶಾಶ್ವತ ಡಿಜಿಟಲ್ ದಾಖಲೆಯನ್ನು ಹೊಂದಿರುತ್ತದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.
ಆನ್‌ಲೈನ್ ಲಸಿಕೆ ನಿರ್ವಹಣೆಯ ಪೋರ್ಟಲ್ ನಲ್ಲಿ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಎಲ್ಲಾ ಗರ್ಭಿಣಿಯರು ಮತ್ತು ಮಕ್ಕಳ ಪ್ರತಿ ಲಸಿಕೆಯ ಮಾಹಿತಿ ಇರುತ್ತದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಲಸಿಕೆ ಕಾರ್ಯಕ್ರಮಕ್ಕಾಗಿ COWIN ಆ್ಯಪ್ ಪ್ರಾರಂಭಿಸಲು ಯೋಜಿಸಿದೆ ಎಂಬುದರ ಕುರಿತು ಏಪ್ರಿಲ್ 2022 ರಲ್ಲಿ TNIE ಮೊದಲ ಬಾರಿಗೆ ಸುದ್ದಿ ಪ್ರಕಟಿಸಿತ್ತು.
ಪ್ರಪಂಚದಾದ್ಯಂತ ಇತರ ದೇಶಗಳಿಗೆ ಲಭ್ಯವಾಗುವಂತೆ ಮಾಡಿದ CoWIN ಆ್ಯಪ್ ನ್ನು COVID-19 ವ್ಯಾಕ್ಸಿನೇಷನ್ ನಿರ್ವಹಿಸಲು ಬಳಸಲಾಗಿದೆ. ಈ ತಿಂಗಳ ಮಾಸಾಂತ್ಯಕ್ಕೆ U-WIN ಪೋರ್ಟಲ್ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದರು.
ಇದರಲ್ಲಿ UIP ಅಡಿಯಲ್ಲಿ ನಿರ್ವಹಿಸಲಾದ ಎಲ್ಲಾ 12 ವ್ಯಾಕ್ಸಿನೇಷನ್‌ಗಳಿಗೆ ಡಿಜಿಟಲ್ ವ್ಯಾಕ್ಸಿನೇಷನ್ ಪ್ರಮಾಣಪತ್ರ ನೀಡಲಾಗುತ್ತದೆ. ಟೆಲಿಮೆಡಿಸಿನ್, ಟೆಲಿಮಾನಸ್, ಇರಾಕ್ಟ್‌ಕೋಶ್ ಮುಂತಾದ ವಿವಿಧ ವಿಭಾಗಗಳಲ್ಲಿ ಈಗಾಗಲೇ ಅನೇಕ ಪೋರ್ಟಲ್‌ಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅವುಗಳನ್ನು ಒಂದೇ ಪೋರ್ಟಲ್‌ನಲ್ಲಿ ಸಂಯೋಜಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಡಿಜಿಟಲ್ ಪರಿಹಾರಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಚಂದ್ರ, ಆರೋಗ್ಯ ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಡಿಜಿಟಲ್ ಮಿಷನ್‌ನ ಗುರಿಯಾಗಿದೆ ಎಂದರು.
ನೀತಿ ಆಯೋಗದ ಸದಸ್ಯ ಡಾ. ವಿಕೆ ಪಾಲ್ ಮಾತನಾಡಿ, ಭಾರತದಲ್ಲಿ ಆರೋಗ್ಯ ಕ್ಷೇತ್ರದಾದ್ಯಂತ ಬದಲಾವಣೆಗಳು ನಡೆಯುತ್ತಿದ್ದು, ಮುಂದಿನ ವಯಸ್ಸಿನ ಆರೋಗ್ಯ ರಕ್ಷಣೆಯ ಹೊರೆಯನ್ನು ಕಡಿಮೆ ಮಾಡುವುದು ಪ್ರಾಥಮಿಕ ಆರೋಗ್ಯ ವ್ಯವಸ್ಥೆಯು ಹೆಚ್ಚಿನ ಆದ್ಯತೆಯಾಗಿದೆ ಎಂದರು.
ಎನ್‌ಎಚ್‌ಆರ್‌ಸಿ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್, "ಆರೋಗ್ಯ ರಕ್ಷಣೆ ಮಾನವ ಮೂಲಭೂತ ಹಕ್ಕು. ಉತ್ತಮ ಆರೋಗ್ಯವಿಲ್ಲದೆ, ಮಾನವನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಎನ್‌ಎಚ್‌ಆರ್‌ಸಿಯ ಗಮನ ಆರ್ಥಿಕತೆಯಿಂದ ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
Advertisement