
ಭೋಪಾಲ್: ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹುತಾತ್ಮರಾದ ಸೇನಾ ಸಿಬ್ಬಂದಿ ಪ್ರದೀಪ್ ಪಟೇಲ್ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ 1 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದೆ.
ಶನಿವಾರ ಮಧ್ಯಾಹ್ನ ಖಜುರಾಹೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಪಾಯಿ ಪಟೇಲ್ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಮೋಹನ್ ಯಾದವ್ ಪುಷ್ಪ ನಮನ ಸಲ್ಲಿಸಿದರು.
ಹುತಾತ್ಮ ಯೋಧ ಮೂಲತಃ ರಾಜ್ಯದ ಕಟ್ನಿ ಜಿಲ್ಲೆಯ ಹರ್ದುವಾ ಗ್ರಾಮದವರು.
ಖಜುರಾಹೊ ವಿಮಾನ ನಿಲ್ದಾಣದಲ್ಲಿ ವೀರ ಯೋಧನಿಗೆ ಪುಷ್ಪ ನಮನ ಸಲ್ಲಿಸಿದ್ದು, ಮೃತರು ಮದುವೆಯಾಗದ ಕಾರಣ ಅವರ ಪೋಷಕರಿಗೆ 1 ಕೋಟಿ ರೂ. ನೀಡುವುದರೊಂದಿಗೆ ಈ ದುಃಖದ ಸಮಯದಲ್ಲಿ ರಾಜ್ಯ ಸರ್ಕಾರ ಹುತಾತ್ಮ ಯೋಧನ ಕುಟುಂಬದೊಂದಿಗೆ ನಿಂತಿದೆ ಎಂದು ಯಾದವ್ ಹೇಳಿದರು. ಸಂಜೆ ಹರ್ದುವಾ ಗ್ರಾಮದಲ್ಲಿ ಪಟೇಲ್ ಅವರಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನೆರವೇರಿತು.
ಸೆಪ್ಟಂಬರ್ 5 ರಂದು ಸಿಕ್ಕಿಂನ ಪಾಕ್ಯೊಂಗ್ ಜಿಲ್ಲೆಯಲ್ಲಿ ಸೇನೆಯ ಇಎಂಸಿ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನವು ರೆನಾಕ್-ರೋಂಗ್ಲಿ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಅರಣ್ಯಕ್ಕೆ ಉರುಳಿದಾಗ ಸಿಪಾಯಿ ಪ್ರದೀಪ್ ಪಟೇಲ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದರು.
Advertisement