ಕೋಲ್ಕತ್ತಾ: ವಿವಿಧ ಶಿಕ್ಷಣ ಸಂಸ್ಥೆಗಳ ಮಾಜಿ ವಿದ್ಯಾರ್ಥಿಗಳು, ಕ್ಲೇ ಮಾಡೆಲರ್‌ಗಳು, ರಿಕ್ಷಾ ಚಾಲಕರು ಮತ್ತು ಕಿರಿಯ ವೈದ್ಯರು. ಎಲ್ಲಾ ವರ್ಗಗಳ ಜನರು ಪ್ರತ್ಯೇಕವಾಗಿ ಭಾನುವಾರ ಕೋಲ್ಕತ್ತಾದ ಬೀದಿಗಿಳಿದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು.
ದಕ್ಷಿಣ ಕೋಲ್ಕತ್ತಾದಲ್ಲಿ, 40ಕ್ಕೂ ಹೆಚ್ಚು ಶಾಲೆಗಳ ಸುಮಾರು 4,000 ಮಾಜಿ ವಿದ್ಯಾರ್ಥಿಗಳು, ಅವರಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸಂತ್ರಸ್ತೆಗೆ ನ್ಯಾಯಕ್ಕಾಗಿ 2 ಕಿ.ಮೀ ದೂರ ನಡೆದರು. ಗರಿಯಾಹತ್‌ನಿಂದ ಶ್ಯಾಮಪ್ರಸಾದ್ ಮುಖರ್ಜಿ ರಸ್ತೆಯ ಕ್ರಾಸಿಂಗ್‌ಗೆ ರಾಶ್‌ಬಿಹಾರಿ ಅವೆನ್ಯೂದಲ್ಲಿ ನಡೆದಾಗ ವಿವಿಧ ವಯೋಮಾನದ ಮಾಜಿ ವಿದ್ಯಾರ್ಥಿಗಳು 'ವಿ ವಾಂಟ್ ಜಸ್ಟಿಸ್' ಎಂದು ಘೋಷಣೆ ಕೂಗಿದರು.
ಬಿನೋದಿನಿ ಬಾಲಕಿಯರ ಶಾಲೆ, ಮಿತ್ರ ಸಂಸ್ಥೆ, ಗಾರ್ಫಾ ಹೈಸ್ಕೂಲ್, ಕಾರ್ಮೆಲ್ ಹೈಸ್ಕೂಲ್ ಮತ್ತು ಸೇಂಟ್ ಜಾನ್ಸ್ ಡಯೋಸಿಸನ್ ಮುಂತಾದ ಸಂಸ್ಥೆಗಳ ಮಾಜಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು. ಪ್ರಮುಖ ಸಂಘಟಕರಾದ ಗರಿಮಾ ಘೋಷ್ ಅವರು, ಕ್ರೂರ ದಾಳಿ-ಕೊಲೆಯಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ, ನಾವು ಎಲ್ಲಾ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಬಯಸುತ್ತೇವೆ ಎಂದು ಅವರು ಹೇಳಿದರು.
ಶಿಲ್ಪಿ ಸನಾತನ ದಿಂಡಾ ಮತ್ತು ಗಾಯಕಿ ಲಗ್ನಜಿತಾ ಕೂಡ ಮೆರವಣಿಗೆಯ ಭಾಗವಾಗಿದ್ದರು. ಘಟನೆ ನಡೆದು ಒಂದು ತಿಂಗಳು ಕಳೆದಿದೆ. ಆದರೆ ಅಪರಾಧಿಗಳಿಗೆ ಶಿಕ್ಷೆಯಾಗೂವವರೆಗೂ ನಮ್ಮೊಳಗಿನ ಬೆಂಕಿಯು ಹಾರುವುದಿಲ್ಲ ಎಂದು ದಿಂಡಾ ಹೇಳಿದರು. ನಮ್ಮ ಸಹೋದರಿಗೆ ನ್ಯಾಯ ಸಿಗುವವರೆಗೆ ನಾವು ವಿರಮಿಸುವುದಿಲ್ಲ, ತಿಂಗಳುಗಟ್ಟಲೆಯಾದರೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಚಳವಳಿಯ ಖ್ಯಾತ ಮುಖ ಲಗ್ನಜಿತಾ ಹೇಳಿದ್ದಾರೆ.
ಸುಮಾರು 100 ಜನರು ತಮ್ಮ ಕೈಯಿಂದ ಎಳೆದ ರಿಕ್ಷಾಗಳೊಂದಿಗೆ ಉತ್ತರ ಕೋಲ್ಕತ್ತಾದ ಹೆಡುವಾ ಪಾರ್ಕ್‌ನಿಂದ ಕಾಲೇಜು ಚೌಕದವರೆಗೆ ರ್ಯಾಲಿ ನಡೆಸಿದರು. ನಾವು ಅಭಯಾಗೆ ನ್ಯಾಯ ಸಿಗಲೆಂದು ಕೋರುತ್ತೇನೆ ಬಿಹಾರದ ದರ್ಭಾಂಗಾದವರಾದ ರಿಕ್ಷಾ ಚಾಲಕ ರಾಮೇಶ್ವರ ಶಾ ಹೇಳಿದರು.
Advertisement