ಕಲ್ಕತ್ತಾ: ಇಲ್ಲಿನ ಸರ್ಕಾರಿ ಆರ್ ಜಿ ಕಾರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಟ್ರೈನಿ ಮಹಿಳಾ ಡಾಕ್ಟರ್ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆ ನಡೆದು 30 ದಿನಗಳು ಕಳೆದರೂ ಈ ಅಪರಾಧಕ್ಕೆ ಕಾರಣವೇನು ಎಂಬುದರ ಕುರಿತು ತನಿಖಾಧಿಕಾರಿಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ.
ಆಗಸ್ಟ್ 9 ರಂದು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಟ್ರೈನಿ ವೈದ್ಯರ ಶವ ಪತ್ತೆಯಾಗಿತ್ತು. ಆಗಸ್ಟ್ 13 ರಂದು ಕಲ್ಕತ್ತಾ ಪೊಲೀಸರಿಂದ ತನಿಖೆಯನ್ನು ಹೈಕೋರ್ಟ್ ವರ್ಗಾಯಿಸಿದ ನಂತರ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು. ಆದರೆ ಅಪರಾಧದ ಸ್ಥಳದಿಂದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಏನನ್ನೂ ಸೇರಿಸಲು ಸಾಧ್ಯವಾಗುವುದಿಲ್ಲ. ಇದು ತನಿಖೆ ಮೇಲೆ ಪರಿಣಾಮ ಬೀರಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಆಗಸ್ಟ್ 10 ರಂದು ಆ ಸೆಮಿನಾರ್ ಕೊಠಡಿಯ ಸಮೀಪವಿರುವ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ಕೆಡವಲು ಆದೇಶಿಸಿದ್ದರು ಎಂಬುದು ತನಿಖೆ ವೇಳೆ ಕಂಡುಬಂದಿದೆ. ಇವೆರಡೂ ಪ್ರದೇಶಗಳ ಒಂದು ಭಾಗವನ್ನು ಲೋಕೋಪಯೋಗಿ ಇಲಾಖೆಯಿಂದ ಕೆಡವಿದ್ದರಿಂದ ಪ್ರಮುಖ ಸಾಕ್ಷ್ಯಾಧಾರಗಳು ಕಳೆದುಹೋಗಿವೆ ಎಂದು ಶಂಕಿಸಲಾಗಿದೆ. ಅದಲ್ಲದೆ, ಶವ ಪತ್ತೆಯಾದ ಕೂಡಲೇ ಸೆಮಿನಾರ್ ಕೊಠಡಿಯಲ್ಲಿ ಜನರಿಂದ ಕಿಕ್ಕಿರಿದಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕಾಣಿಸಿಕೊಂಡಿದೆ.
ಪ್ರಕರಣ ಸಂಬಂಧ ಘೋಷ್, ಇತರ ವೈದ್ಯರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಬಂಧಿತ ಪ್ರಮುಖ ಆರೋಪಿ ಸಂಜಯ್ ರಾಯ್ ಸೇರಿದಂತೆ ಸಾಕ್ಷಿಗಳನ್ನು ಸಿಬಿಐ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಈ ಕಾರಣದಿಂದಾಗಿ ನಮ್ಮ ತನಿಖಾ ತಂಡ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸಾಂದರ್ಭಿಕ ಪುರಾವೆಗಳು, ಜನರನ್ನು ಪ್ರಶ್ನಿಸುವುದು ಮತ್ತು ಡಿಎನ್‌ಎ ಸಾಕ್ಷಿಯಿಂದ ಲೈಂಗಿಕ ದೌರ್ಜನ್ಯದಲ್ಲಿ ಅನೇಕ ವ್ಯಕ್ತಿಗಳಿದ್ದಾರೆ ಎಂಬುದು ಗೊತ್ತಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.
ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯ ನಡೆಸಿದ ಪರೀಕ್ಷೆಯಲ್ಲಿ ಸಂತ್ರಸ್ತೆ ಮತ್ತು ಬಂಧಿತ ಸಂಜಯ್ ರಾಯ್ ನಡುವಿನ ಡಿಎನ್‌ಎ ಹೊಂದಾಣಿಕೆಯನ್ನು ದೃಢಪಡಿಸಿವೆ ಎಂದು ಅವರು ಹೇಳಿದರು. ಸಾಕ್ಷ್ಯಾಧಾರಗಳನ್ನು ತಿರುಚಲಾಗಿದೆ ಎಂದು ಮೃತರ ಪೋಷಕರೂ ಕೂಡಾ ಆರೋಪವನ್ನು ಮಾಡಿದ್ದಾರೆ.
Advertisement