
ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿರುವ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಹಿರಿಯ ಅಧಿಕಾರಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ.
ವಿಂಗ್ ಕಮಾಂಡರ್ ವಿರುದ್ಧ ಜಮ್ಮು-ಕಾಶ್ಮೀರದ ಬದ್ಗಾಮ್ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿದೆ. ಇಬ್ಬರೂ ಅಧಿಕಾರಿಗಳು ಶ್ರೀನಗರದಲ್ಲಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವಾಯುಪಡೆ, ಅಧಿಕಾರಿಗಳೊಂದಿಗೆ ತನಿಖೆಗೆ ಸಹಕರಿಸುತ್ತಿರುವುದಾಗಿ ತಿಳಿಸಿದೆ.
2 ವರ್ಷಗಳಿಂದ ತಾನು ಹಿರಿಯ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ ಎಂದು ದೂರಿನಲ್ಲಿ ಮಹಿಳಾ ಅಧಿಕಾರಿ ಹೇಳಿದ್ದಾರೆ.
2023 ರ ಡಿ.31 ರಂದು ಹೊಸ ವರ್ಷಾಚರಣೆ ಪಾರ್ಟಿಗಾಗಿ ಆಫೀಸರ್ಸ್ ಮೆಸ್ ಗೆ ಆಹ್ವಾನಿಸಿದ್ದರು. ಅಲ್ಲಿ ನಿಮಗೆ ಗಿಫ್ಟ್ ಸಿಕ್ಕಿದೆಯೇ? ಎಂದು ಕೇಳಿದಾಗ ಇಲ್ಲ ಎಂದು ಹೇಳಿದ್ದೆ, ಅದಕ್ಕೆ ತನ್ನ ಹಿರಿಯ ಅಧಿಕಾರಿ ಗಿಫ್ಟ್ ರೂಮಿನಲ್ಲಿದೆ ಎಂದು ಕೊಠಡಿಗೆ ಕರೆದೊಯ್ದರು ಆ ವೇಳೆ ನಿಮ್ಮ ಕುಟುಂಬದವರು ಎಲ್ಲಿದ್ದಾರೆ? ಎಂದು ಕೇಳಿದ್ದಕ್ಕೆ ಬೇರೆ ಕಡೆ ಇದ್ದಾರೆ ಎಂದು ಹೇಳಿ ಅಸಭ್ಯವಾಗಿ ವರ್ತಿಸಿದರು ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
"ನನ್ನ ಹಿರಿಯ ಅಧಿಕಾರಿ ಮುಖ ಮೈಥುನಕ್ಕೆ ಒತ್ತಾಯಿಸಿ, ಲೈಂಗಿಕ ದೌರ್ಜನ್ಯ ಎಸಗಿದರು. ನಾನು ಪ್ರತಿರೋಧವೊಡ್ಡಿ ಆತನನ್ನು ತಳ್ಳಿ ಓಡಿ ಹೋದೆ, ಆ ಬಳಿಕ ಮತ್ತೆ ನನ್ನನ್ನು ಭೇಮಾಡಿದಾಗ ಏನು ಆಗೇ ಇಲ್ಲವೆಂಬಂತೆ ವರ್ತಿಸಿದ್ದರು" ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ.
Advertisement