ಹಿಮಾಚಲ ಪ್ರದೇಶ: ಮಸೀದಿಗೆ 2 ಲಕ್ಷ ರೂ. ನೀಡಿದ್ದ ಬಿಜೆಪಿಯ ಜೈರಾಮ್ ಠಾಕೂರ್- ಕಾಂಗ್ರೆಸ್

ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಕೆಲ ಬಿಜೆಪಿಯವರು ಹಾಗೂ ಸಮಾಜ ವಿರೋಧಿಗಳು ಪಾಲ್ಗೊಂಡಿದ್ದು, ಕಲ್ಲು ತೂರಾಟ ನಡೆಸಿದ್ದರಿಂದ ಆರು ಮಂದಿ ಪೊಲೀಸರು ಗಾಯಗೊಂಡಿದ್ದರು.
ಜೈರಾಮ್ ಠಾಕೂರ್
ಜೈರಾಮ್ ಠಾಕೂರ್
Updated on

ಶಿಮ್ಲಾ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಮ್ಮ ಅಧಿಕಾರವಧಿಯಲ್ಲಿ ಮಸೀದಿಯ ಭಾಗವೊಂದರ ನಿರ್ಮಾಣಕ್ಕಾಗಿ ರೂ. 2 ಲಕ್ಷ ಹಣ ನೀಡಿದ್ದಾರೆ. ಆದರೆ ಈಗ ರಾಜ್ಯದಲ್ಲಿ ಶಾಂತಿಯನ್ನು ಕೆಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಚಿವ ಅನಿರುದ್ ಸಿನ್ಹಾ ಗುರುವಾರ ಹೇಳಿದ್ದಾರೆ.

ಮತ್ತೊಂದೆಡೆ ಈ ಹೇಳಿಕೆಯನ್ನು ನಿರಾಧಾರ ಎಂದಿರುವ ಠಾಕೂರ್, ತನ್ನ ವಿಫಲತೆ ಮುಚ್ಚಿಡಲು ಕಾಂಗ್ರೆಸ್ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಒತ್ತಡದ ಕಾರಣ ಅವರ ಹೇಳಿಕೆಯನ್ನು ಬದಲಾಯಿಸುತ್ತಿದ್ದಾರೆ ಎಂದಿದ್ದಾರೆ.

ಶಿಮ್ಲಾದಲ್ಲಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಅನಿರುದ್ ಸಿನ್ಹಾ, ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್ ಅವಧಿಯಲ್ಲಿ ಮಸೀದಿಯ ಭಾಗವೊಂದನ್ನು ನಿರ್ಮಿಸಲಾಗಿತ್ತು. ಶಿಮ್ಲಾದ ಮೇಯರ್ ಕೂಡಾ ಬಿಜೆಪಿಯವರೇ ಆಗಿದ್ದರು ಎಂದರು.

ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಕೆಲ ಬಿಜೆಪಿಯವರು ಹಾಗೂ ಸಮಾಜ ವಿರೋಧಿಗಳು ಪಾಲ್ಗೊಂಡಿದ್ದು, ಕಲ್ಲು ತೂರಾಟ ನಡೆಸಿದ್ದರಿಂದ ಆರು ಮಂದಿ ಪೊಲೀಸರು ಗಾಯಗೊಂಡಿದ್ದರು. ತದನಂತರ ಪೊಲೀಸರು ಲಘು ಪ್ರಹಾರ ನಡೆಸಿದ್ದಾರೆ ಎಂದು ಸಚಿವರು ಆರೋಪಿಸಿದರು.

ಜೈರಾಮ್ ಠಾಕೂರ್
ಬಿಜೆಪಿಗೆ ಮತ ಹಾಕಿದ್ದಕ್ಕೆ ಥಳಿತಕ್ಕೊಳಗಾಗಿದ್ದ ಮುಸ್ಲಿಂ ಮಹಿಳೆ ಭೇಟಿಯಾದ ಶಿವರಾಜ್ ಸಿಂಗ್ ಚೌಹಾಣ್

ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲಾ, ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯವಾಗಿದೆ. ಕಾನೂನು ಮುಂದಿನ ಕ್ರಮ ಕೈಗೊಳ್ಳಲಿದೆ. ಆದರೆ, ಕೆಲವರು ಈ ವಿಚಾರಕ್ಕೆ ರಾಜಕೀಯ ಬಣ್ಣ ಕಟ್ಟಿ, ಜನರಲ್ಲಿ ಭಯ ಮೂಡಿಸಿ ಶಾಂತಿ ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ಅಲ್ಲದೇ ಅಕ್ರಮ ನಿರ್ಮಾಣ ಧ್ವಂಸಕ್ಕೆ ಮುಂದಾಗಿರುವ ಮುಸ್ಲಿಂ ಕಲ್ಯಾಣ ಸಮಿತಿಯ ನಡೆಯನ್ನು ಅನಿರುದ್ ಸಿಂಗ್ ಹಾಗೂ ವಿಕ್ರಮಾದಿತ್ಯ ಸಿಂಗ್ ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com