ಜಮ್ಮು-ಕಾಶ್ಮೀರ: 42 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೋಡಾಗೆ ಪ್ರಧಾನಿ ಭೇಟಿ; ಮೋದಿ ಮೆಗಾ ರ‍್ಯಾಲಿ!

ದೋಡಾದ ಸ್ಟೇಡಿಯಂನಲ್ಲಿ ನಡೆಯಲಿರುವ ಚುನಾವಣಾ ರ‍್ಯಾಲಿಯನ್ನು ಶಾಂತಿಯುತ ಮತ್ತು ಸುಗಮವಾಗಿ ನಡೆಸಲು ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಾದ್ಯಂತ ಬಿಗಿಭದ್ರತೆ ಏರ್ಪಡಿಸಲಾಗಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ದೋಡಾ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಬಿಗಿ ಭದ್ರತೆ ನಡುವೆ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ.

ಕಳೆದ 42 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ದೋಡಾಗೆ ಭೇಟಿ ನೀಡುತ್ತಿದ್ದಾರೆ.ದೋಡಾದ ಸ್ಟೇಡಿಯಂನಲ್ಲಿ ನಡೆಯಲಿರುವ ಚುನಾವಣಾ ರ‍್ಯಾಲಿಯನ್ನು ಶಾಂತಿಯುತ ಮತ್ತು ಸುಗಮವಾಗಿ ನಡೆಸಲು ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಾದ್ಯಂತ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಪ್ರಧಾನಿ ಮೋದಿ ನಾಳೆ ದೋಡಾದಲ್ಲಿ ತಮ್ಮ ಮೊದಲ ಚುನಾವಣಾ ಸಭೆ ನಡೆಸಲಿದ್ದಾರೆ. 42 ವರ್ಷಗಳಲ್ಲಿ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ದೋಡಾಗೆ ಭೇಟಿ ನೀಡುತ್ತಿರುವ ಕಾರಣ ಇದು ಮಹತ್ವದ ಘಟನೆಯಾಗಿದೆ. 1982 ರಲ್ಲಿ ಕೊನೆಯದಾಗಿ ಪ್ರಧಾನಿಯೊಬ್ಬರು ದೋಡ್ಡಾಗೆ ಭೇಟಿ ನೀಡಿದ್ದರು ಎಂದು ಕೇಂದ್ರ ಸಚಿವ ಹಾಗೂ ಜಮ್ಮು- ಕಾಶ್ಮೀರದ ಬಿಜೆಪಿಚುನಾವಣಾ ಉಸ್ತುವಾರಿ ಜಿ ಕಿಶನ್ ರೆಡ್ಡಿ ಶುಕ್ರವಾರ ಸಾಂಬಾದಲ್ಲಿ ಹೇಳಿದರು.

ಪ್ರಧಾನಿ ಮೋದಿ
ಜಮ್ಮು-ಕಾಶ್ಮೀರ ಚುನಾವಣೆ: ಶ್ರೀನಗರದ 8 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರರೇ ಅಧಿಕ!

ಚೀನಾಬ್ ಕಣಿವೆಯ ಮೂರು ಜಿಲ್ಲೆಗಳಾದ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ನ ಎಂಟು ಅಸೆಂಬ್ಲಿ ಸ್ಥಾನಗಳಿಗೆ ಸೆಪ್ಟೆಂಬರ್ 18 ರಂದು ನಡೆಯಲಿರುವ ಮತದಾನಕ್ಕೆ ಪ್ರಧಾನಿ ಅವರ ಭೇಟಿ ಪಕ್ಷದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಲಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com