ಉತ್ತಾರಾಖಂಡ್: ನಿರಂತರ ಭಾರಿ ಮಳೆ ಹಾಗೂ ಭೂಕುಸಿತಗಳು ಉತ್ತರಾಖಂಡ್ ರಾಜ್ಯವನ್ನು ಅಸ್ತವ್ಯಸ್ತಗೊಳಿಸಿವೆ. ಇತ್ತೀಚಿನ ಮಾಹಿತಿಯ ಪ್ರಕಾರ ಉತ್ತರಾಖಂಡ್ ನಲ್ಲಿ ಭಾರಿ ಮಳೆ ಹಾಗೂ ಭೂ ಕುಸಿತಗಳ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.
ಸಂಚಾರ ಮಾರ್ಗಗಳ ಮೇಲೆಯೂ ಭೂಕುಸಿತ ಪರಿಣಾಮ ಬೀರಿದ್ದು, ಕುಮಾನ್ ನಲ್ಲಿ 185 ರಸ್ತೆಗಳು ಸೇರಿದಂತೆ 324 ರಸ್ತೆಗಳ ಮೇಲೆ ಅವಶೇಷಗಳು ಮತ್ತು ಬಂಡೆಗಳು ಬಿದ್ದಿವೆ.
ಭಾರಿ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹಕ್ಕೆ ಶುಕ್ರವಾರದಂದು 3 ಮಹಿಳೆಯರು ಸೇರಿ ಒಟ್ಟು 6 ಮಂದಿ ಜೀವ ಕಳೆದುಕೊಂಡಿದ್ದಾರೆ. ಓರ್ವ ಹದಿಹರೆಯದ ವ್ಯಕ್ತಿ ಸೇರಿ ಇಬ್ಬರು ವ್ಯಕ್ತಿಗಳು ಇನ್ನೂ ನಾಪತ್ತೆಯಾಗಿದ್ದಾರೆ.
ಉತ್ತರಾಖಂಡದಲ್ಲಿ ಇತ್ತೀಚೆಗೆ ಸಂಭವಿಸಿದ ಹಠಾತ್ ಪ್ರವಾಹವು ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ, ಇತ್ತೀಚಿನ ವರದಿಗಳು ಕಳೆದ 24 ಗಂಟೆಗಳಲ್ಲಿ ಆರು ಸಾವುಗಳನ್ನು ದೃಢಪಡಿಸಿವೆ. ಲೋಹಘಾಟ್‌ನ ಧೌರ್ಜಾ ಗ್ರಾಮದಲ್ಲಿ ದನದ ಕೊಟ್ಟಿಗೆಯ ಮೇಲೆ ಮರ ಮತ್ತು ಅವಶೇಷಗಳು ಬಿದ್ದು ಮಾಧ್ವಿ ದೇವಿ (58) ಸಾವನ್ನಪ್ಪಿದ್ದಾರೆ ಎಂದು ಡಿಡಿಎಂಎ ಮೂಲಗಳು ಖಚಿತಪಡಿಸಿವೆ. ಶಾಂತಿ ದೇವಿ (55) ಮಿತ್ಯಾನಿ ಗ್ರಾಮದ ನಕೇಲಾ ಟೋಕ್‌ನಲ್ಲಿ ಅವಶೇಷಗಳಡಿ ಸಿಲುಕಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಜಗದೀಶ್ ಸಿಂಗ್ ಬೋಹ್ರಾ ಎಂಬ 15 ವರ್ಷದ ವಿದ್ಯಾರ್ಥಿ ನಾಪತ್ತೆಯಾಗಿದ್ದಾರೆ. ಪಿಥೋರಗಢದ ಗಣಕೋಟ್ ಗ್ರಾಮದಲ್ಲಿ ದೇವಕಿ ದೇವಿ (70) ಮನೆಯ ಮೇಲೆ ಅವಶೇಷಗಳು ಬಿದ್ದು ಸಾವನ್ನಪ್ಪಿದ್ದಾರೆ. ಅಲ್ಮೋರಾದ ಭೈಸಿಯಾಚನಾದಲ್ಲಿ, 73 ವರ್ಷದ ಡಾನ್ ಸಿಂಗ್ ಥಿಕ್ಲಾನಾ ಗ್ರಾಮದಲ್ಲಿ ಹೊಳೆ ದಾಟುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
"ಸಿತಾರಗಂಜ್‌ನ ಕೌಂಧಾ ಗ್ರಾಮದ ರೈತ ಗುರ್ನಾಮ್ ಸಿಂಗ್ (38) ಕೈಲಾಸ ನದಿಯಿಂದ ಕೊಚ್ಚಿಹೋಗಿದ್ದಾರೆ ಮತ್ತು ಹುಡುಕಾಟ ಪ್ರಯತ್ನಗಳ ಹೊರತಾಗಿಯೂ ಪತ್ತೆಯಾಗಿಲ್ಲ" ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಮುನ್ಸಿಯಾರಿಯಲ್ಲಿ ಗಸ್ತಿನಲ್ಲಿದ್ದ ಐಟಿಬಿಪಿ ಜವಾನ ಹಾಗೂ ಹಮಾಲಿ ನಾಪತ್ತೆಯಾಗಿದ್ದಾರೆ. ಶನಿವಾರ ಹೆಲಿಕಾಪ್ಟರ್ ಹುಡುಕಾಟದ ಹೊರತಾಗಿಯೂ, ಅವರು ಪತ್ತೆಯಾಗಿಲ್ಲ.
Advertisement