ಮಧ್ಯ ಪ್ರದೇಶ: ಹೋಟೆಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೇನಾ ನಾಯಕ್ ಬಂಧನ
ಭೋಪಾಲ್: ಹೋಟೆಲ್‌ನಲ್ಲಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೇನಾ ನಾಯಕ್‌ನನ್ನು ಇಂದೋರ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆದರೆ ಮಹಿಳೆ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ನಾಯಕ್ ನಿರಾಕರಿಸಿದ್ದಾರೆ.
ಇಂದೋರ್ ಮಹಿಳಾ ಪೊಲೀಸ್ ಠಾಣೆಯ ತಂಡ, ಎಂಐಜಿ ಪ್ರದೇಶದ ಐಷಾರಾಮಿ ಹೋಟೆಲ್‌ನಲ್ಲಿ ನಾಯಕ್‌ನನ್ನು ಬಂಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಂದೋರ್‌ನಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರ ಪತ್ನಿಯಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸ್ ತಂಡ ಹೋಟೆಲ್ ಮೇಲೆ ದಾಳಿ ನಡೆಸಿ ಸೇನಾ ನಾಯಕ್ ನನ್ನು ಬಂಧಿಸಿದೆ ಎಂದು ಇಂದೋರ್ ಮಹಿಳಾ ಠಾಣಾ ಉಸ್ತುವಾರಿ ಕೌಶಲ್ಯ ಚೌಹಾಣ್ ಅವರು ತಿಳಿಸಿದ್ದಾರೆ.
ಪೂರ್ವ ಉತ್ತರ ಪ್ರದೇಶದವರಾದ ಈ ಸೇನಾಧಿಕಾರಿಯನ್ನು ಕಳೆದ ವರ್ಷ ಇಂದೋರ್ ಜಿಲ್ಲೆಯ ಮೊವ್ ಕಂಟೋನ್ಮೆಂಟ್ ಪಟ್ಟಣದಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ವಿವಾಹಿತ ಮಹಿಳೆಯನ್ನು ಭೇಟಿಯಾಗಿ ಆರ್ಮಿ ಕ್ಯಾಂಟೀನ್ ಕಾರ್ಡ್ ನೀಡಿದ ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸೇನಾ ನಾಯಕ್ ತನ್ನ ಆಕ್ಷೇಪಾರ್ಹ ವಿಡಿಯೋ ಹೊಂದಿದ್ದು, ಅದನ್ನು ಬಲವಂತವಾಗಿ ದೈಹಿಕ ಸಂಬಂಧಕ್ಕೆ ಬಳಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಶುಕ್ರವಾರ, ಇಂದೋರ್‌ನ ಹೋಟೆಲ್‌ಗೆ ಬರುವಂತೆ ಹೇಳಿದ್ದ ಸೇನಾ ನಾಯಕ್, ಅಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಖಾಸಗಿ ಭಾಗದಲ್ಲಿ ಗ್ಲಾಸ್ ಸೇರಿಸಲು ಯತ್ನಿಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ ಎಂದು ಮಹಿಳಾ ಠಾಣಾ ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, ಶಂಕಿತ ಆರೋಪಿಯು ಆರೋಪಗಳನ್ನು ನಿರಾಕರಿಸಿದ್ದು, ತಾನು ಮತ್ತು ಮಹಿಳೆ ಸಮ್ಮತಿಯ ಲೈಂಗಿಕ ಸಂಬಂಧವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ