ಆಗ್ರಾದಲ್ಲಿ ನಿರಂತರ ಮಳೆ: ತಾಜ್ ಮಹಲ್‌ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ!

20 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಮಾರಕದ ಉದ್ಯಾನ ಮಳೆ ನೀರಿನಲ್ಲಿ ಮುಳುಗಿದೆ.
ತಾಜ್ ಮಹಲ್‌
ತಾಜ್ ಮಹಲ್‌
Updated on

ಆಗ್ರಾ: ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರುತ್ತಿದ್ದು, ಆವರಣದಲ್ಲಿರುವ ಉದ್ಯಾನಕ್ಕೂ ನೀರು ನುಗ್ಗಿದೆ.

ಗುರುವಾರ ತಾಜ್‌ಮಹಲ್ ಆವರಣದಲ್ಲಿರುವ ಉದ್ಯಾನ ಮುಳುಗಡೆಯಾಗಿರುವ ವಿಡಿಯೋ ವೈರಲ್ ಆಗಿದ್ದು, ಪ್ರವಾಸಿಗರ ಗಮನ ಸೆಳೆದಿದೆ.

ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ)ಯ ಹಿರಿಯ ಅಧಿಕಾರಿಯೊಬ್ಬರು, ಸೋರಿಕೆಯಿಂದಾಗಿ ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ.

ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿನ ಸೋರಿಕೆ ಕುರಿತು ಮಾತನಾಡಿದ ಆಗ್ರಾ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಅಧೀಕ್ಷಕ ರಾಜ್‌ಕುಮಾರ್ ಪಟೇಲ್ ಅವರು, “ಹೌದು, ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯಾಗಿರುವುದನ್ನು ನಾವು ನೋಡಿದ್ದೇವೆ. ನಾವು ಪರಿಶೀಲಿಸಿದಾಗ ಸೋರಿಕೆಯಿಂದಾಗಿ ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ. ನಾವು ಡ್ರೋನ್ ಕ್ಯಾಮೆರಾ ಮೂಲಕ ಮುಖ್ಯ ಗುಮ್ಮಟವನ್ನು ಪರಿಶೀಲಿಸಿದ್ದೇವೆ ಎಂದು ತಿಳಿಸಿದರು.

ಗುರುವಾರ ಸಂಜೆ, 20 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಮಾರಕದ ಉದ್ಯಾನ ಮಳೆ ನೀರಿನಲ್ಲಿ ಮುಳುಗಿದೆ. ಇದು ಪ್ರವಾಸಿಗರ ಗಮನ ಸೆಳೆದಿದ್ದು, ಹೆಚ್ಚಿನ ಜನ ತಾಜ್ ಮಹಲ್ ಗೆ ಭೇಟಿ ನೀಡಿ, ವಿಡಿಯೋ ಮಾಡಿದರು.

ತಾಜ್ ಮಹಲ್ ಆಗ್ರಾ ಮತ್ತು ಇಡೀ ರಾಷ್ಟ್ರದ ಹೆಮ್ಮೆಯಾಗಿದೆ. ಇದು ನೂರಾರು ಸ್ಥಳೀಯರಿಗೆ ಮತ್ತು ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ನೀಡಿ. ಈ "ಸ್ಮಾರಕದ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು" ಎಂದು ಸರ್ಕಾರದ ಅನುಮೋದಿತ ಪ್ರವಾಸಿ ಮಾರ್ಗದರ್ಶಿ ಮೋನಿಕಾ ಶರ್ಮಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com