NDA ಸರ್ಕಾರದ ಪ್ರಸ್ತುತ ಅವಧಿಯಲ್ಲಿಯೇ 'ಒಂದು ರಾಷ್ಟ್ರ, ಒಂದು ಚುನಾವಣೆ' ಜಾರಿ ವಿಶ್ವಾಸ: ಖಚಿತ ಮೂಲಗಳು
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ತನ್ನ ಪ್ರಸ್ತುತ ಅಧಿಕಾರಾವಧಿಯಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ'ಯನ್ನು ಜಾರಿಗೆ ತರಲಿದೆ ಎಂದು ಮೂಲಗಳು ತಿಳಿಸಿದ್ದು, ದೇಶದ ಸುಧಾರಣಾ ಕ್ರಮ ಇದಾಗಿದ್ದು, ಪಕ್ಷಾತೀತವಾಗಿ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-3ನೇ ಅವಧಿಯ ಸರ್ಕಾರ 100 ದಿನಗಳು ಪೂರ್ಣಗೊಳಿಸಿದ್ದು, ಆಡಳಿತಾರೂಢ ಮೈತ್ರಿಕೂಟದ ಒಗ್ಗಟ್ಟು ಇನ್ನು ಉಳಿದ ಅಧಿಕಾರಾವಧಿಯವರೆಗೆ ಮುಂದುವರಿಯುತ್ತದೆ ಎಂದು ಮೂಲಗಳು ತಿಳಿಸಿವೆ.
ಖಂಡಿತವಾಗಿಯೂ ಒಂದು ರಾಷ್ಟ್ರ, ಒಂದು ಚುನಾವಣೆ ಈ ಅಧಿಕಾರಾವಧಿಯಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ ಎಂದು ಒಂದು ಮೂಲವು ಅನಾಮಧೇಯತೆಯ ಷರತ್ತಿನ ಮೇಲೆ ಹೇಳಿದೆ.
ಕಳೆದ ತಿಂಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿಯವರು 'ಒಂದು ರಾಷ್ಟ್ರ, ಒಂದು ಚುನಾವಣೆ'ಯನ್ನು ಪ್ರತಿಪಾದಿಸಿದ್ದರು. ಆಗಾಗ್ಗೆ ಚುನಾವಣೆಗಳು ನಡೆಯುತ್ತಿದ್ದರೆ ದೇಶದ ಪ್ರಗತಿಯಲ್ಲಿ ಅಡಚಣೆಗಳನ್ನು ಉಂಟಾಗುತ್ತವೆ ಎಂದಿದ್ದರು.
'ಒಂದು ರಾಷ್ಟ್ರ, ಒಂದು ಚುನಾವಣೆ'ಗಾಗಿ ರಾಷ್ಟ್ರವು ಮುಂದೆ ಬರಬೇಕಿದೆ,'' ಎಂದು ಪ್ರಧಾನಿ ಮೋದಿ ಕೆಂಪುಕೋಟೆಯ ಮೇಲೆ ಭಾಷಣದಲ್ಲಿ ಹೇಳಿದ್ದರು.
ರಾಷ್ಟ್ರೀಯ ಸಂಪನ್ಮೂಲಗಳು ಜನಸಾಮಾನ್ಯರಿಗೆ ಬಳಕೆಯಾಗುವಂತೆ ಪಕ್ಷಗಳನ್ನು ಕೋರಿದ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕನಸನ್ನು ನನಸಾಗಿಸಲು ನಾವು ಮುಂದಾಗಬೇಕು ಎಂದಿದ್ದರು. 'ಒಂದು ರಾಷ್ಟ್ರ, ಒಂದು ಚುನಾವಣೆ' ಎಂಬುದು ಬಿಜೆಪಿ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ವರ್ಷದ ಮಾರ್ಚ್‌ನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಮೊದಲ ಹಂತವಾಗಿ ಶಿಫಾರಸು ಮಾಡಿತು. ಪ್ರತ್ಯೇಕವಾಗಿ, ಕಾನೂನು ಆಯೋಗವು 2029 ರಿಂದ ಪ್ರಾರಂಭವಾಗುವ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಪುರಸಭೆಗಳು ಮತ್ತು ಪಂಚಾಯತ್‌ಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಎಲ್ಲಾ ಮೂರು ಹಂತದ ಸರ್ಕಾರಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡುವ ಸಾಧ್ಯತೆಯಿದೆ.
ಸಮಿತಿಯು 18 ಸಾಂವಿಧಾನಿಕ ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ, ಇವುಗಳಲ್ಲಿ ಹಲವು ರಾಜ್ಯ ಸರ್ಕಾರಗಳು ಒಲವು ಹೊಂದಿಲ್ಲ. ಇದನ್ನು ಜಾರಿಗೆ ತರಬೇಕಾದರೆ ಇವುಗಳಿಗೆ ಕೆಲವು ಸಂವಿಧಾನ ತಿದ್ದುಪಡಿ ಮಸೂದೆಗಳು ಬೇಕಾಗುತ್ತವೆ ಅದನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ