ಸೋನಿಯಾ ಗಾಂಧಿ ಮಾದರಿಯಲ್ಲಿ ಆಳ್ವಿಕೆ ನಡೆಸಲು ನೋಡುತ್ತಿದ್ದಾರೆ; ಕೇಜ್ರಿವಾಲ್ ರಾಜೀನಾಮೆ ಹೇಳಿಕೆ 'ಪಿಆರ್ ಸ್ಟಂಟ್': ಬಿಜೆಪಿ ಟೀಕೆ

ದೆಹಲಿಯ ನಾಗರಿಕರ ಮುಂದೆ ತಮ್ಮ ಇಮೇಜ್ ಪ್ರಾಮಾಣಿಕವಾಗಿಲ್ಲ, ತಾವು ಭ್ರಷ್ಟರು ಎಂಬುದು ಕೇಜ್ರಿವಾಲ್ ಗೆ ಅರಿವಾಗಿದೆ. ರಾಜೀನಾಮೆ ನೀಡುತ್ತೇನೆ ಎನ್ನುವುದು ಅವರ PR ಸ್ಟಂಟ್.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಎರಡು ದಿನಗಳಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ಸಾರ್ವಜನಿಕ ಮತ್ತು ಮಾಧ್ಯಮಗಳ ಗಮನ ಸೆಳೆಯುವ ಸ್ಟಂಟ್(PR stunt) ಎಂದು ಟೀಕಿಸಿದ್ದಾರೆ.

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ದೆಹಲಿಯ ನಾಗರಿಕರ ಮುಂದೆ ತಮ್ಮ ಇಮೇಜ್ ಪ್ರಾಮಾಣಿಕವಾಗಿಲ್ಲ, ತಾವು ಭ್ರಷ್ಟರು ಎಂಬುದು ಕೇಜ್ರಿವಾಲ್ ಗೆ ಅರಿವಾಗಿದೆ. ರಾಜೀನಾಮೆ ನೀಡುತ್ತೇನೆ ಎನ್ನುವುದು ಅವರ PR ಸ್ಟಂಟ್. ದೆಹಲಿಯ ಜನರಲ್ಲಿ ಅವರ ಇಮೇಜ್ ಪ್ರಾಮಾಣಿಕ ನಾಯಕನದ್ದಲ್ಲ, ಭ್ರಷ್ಟ ನಾಯಕನದು ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಇಂದು ಆಮ್ ಆದ್ಮಿ ಪಕ್ಷವು ದೇಶಾದ್ಯಂತ ಭ್ರಷ್ಟ ಪಕ್ಷವೆಂದು ಗುರುತಿಸಲ್ಪಟ್ಟಿದೆ ಎಂದರು.

ಪಿಆರ್ ಸ್ಟಂಟ್ ನಡಿ ಕೇಜ್ರಿವಾಲ್ ಅವರು ತಮ್ಮ ಇಮೇಜ್ ನ್ನು ಪುನಃಸ್ಥಾಪಿಸಲು ಬಯಸುತ್ತಾರೆ. ಕೇಜ್ರಿವಾಲ್ ಅವರ ತಂತ್ರವು ಅವರು ಸೋನಿಯಾ ಗಾಂಧಿ ಮಾದರಿಯನ್ನು ಹೋಲುತ್ತದೆ ಎಂದು ಅವರು ಆರೋಪಿಸಿದರು, ಅಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಡಮ್ಮಿ ನಾಯಕನ ಮೂಲಕ ಅಂದಿನ ಸರ್ಕಾರವನ್ನು ನಿಯಂತ್ರಿಸುತ್ತಿದ್ದರು. ಇದೀಗ ಕೇಜ್ರಿವಾಲ್ ಅವರು ಸೋನಿಯಾ ಗಾಂಧಿ ಮಾದರಿಯನ್ನು ಅನ್ವಯಿಸಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿದೆ, ಅಲ್ಲಿ ಅವರು ಮನಮೋಹನ್ ಸಿಂಗ್ ಅವರನ್ನು ಡಮ್ಮಿ ಪ್ರಧಾನಿಯನ್ನಾಗಿ ಮಾಡಿ ತೆರೆಮರೆಯಲ್ಲಿ ಸರ್ಕಾರವನ್ನು ನಡೆಸಿದರು ಎಂದರು.

ದೆಹಲಿಯಲ್ಲಿ ಆಪ್ ಗೆ ಬೆಂಬಲ ಕ್ಷೀಣಿಸುತ್ತಿದೆ. ಆಮ್ ಆದ್ಮಿ ಪಕ್ಷವು ದೆಹಲಿ ಚುನಾವಣೆಯಲ್ಲಿ ಸೋಲುತ್ತಿದೆ. ದೆಹಲಿಯ ಜನರು ತಮ್ಮ ಹೆಸರಿನಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಬೇರೊಬ್ಬರನ್ನು ಬಲಿಪಶು ಮಾಡಲು ಅವರು ಬಯಸುತ್ತಿದ್ದಾರೆ ಎಂದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನ್ವಾಲಾ ಅವರು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಕೇಜ್ರಿವಾಲ್ ಭಾವನಾತ್ಮಕ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಖುಲಾಸೆಗೊಳಿಸುವ ಬದಲು ಷರತ್ತುಬದ್ಧ ಜಾಮೀನು ನೀಡುವ ನ್ಯಾಯಾಲಯದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಕೇಜ್ರಿವಾಲ್ ಅವರ ರಾಜೀನಾಮೆ ಘೋಷಣೆಯು ಕಾರ್ಯತಂತ್ರದ ಕ್ರಮವಾಗಿದೆ ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್
ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ಕೇಜ್ರಿವಾಲ್ ಘೋಷಣೆ

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಒಂದೆರಡು ದಿನಗಳ ಹಿಂದೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ 2 ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಒಂದೆರಡು ದಿನಗಳಲ್ಲಿ ಪಕ್ಷವು ನೂತನ ಮುಖ್ಯಮಂತ್ರಿಯನ್ನು ಹೆಸರಿಸಲಿದೆ ಎಂದು ಎಎಪಿ ವರಿಷ್ಠರು ತಿಳಿಸಿದ್ದಾರೆ. ಎಎಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ಈ ಕುರಿತು ಘೋಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com