ಕೋಲ್ಕತ್ತ: ಅನಾರೋಗ್ಯ ಪೀಡಿತ ಪುತ್ರನ ಪಕ್ಕದಲ್ಲಿದ್ದ ಮಹಿಳೆ ಮೇಲೆ ಆಸ್ಪತ್ರೆಯ ನೌಕರನೋರ್ವ ಅತ್ಯಾಚಾರವೆಸಗಿರುವ ಘಟನೆ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಮಹಿಳೆ ನೀಡಿರುವ ದೂರಿನ ಪ್ರಕ್ರಾರ, ಕೋಲ್ಕತ್ತಾದ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ತನಯ್ ಪಾಲ್ (26) ಆಸ್ಪತ್ರೆಯ ಮಾಜಿ ವಾರ್ಡ್ ಬಾಯ್ ಆಗಿದ್ದು, ವಾರ್ಡ್ ಗೆ ನುಗ್ಗಿದ ಆತ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಆಕೆಯನ್ನು ವಿವಸ್ತ್ರಗೊಳಿಸಿದ್ದಾನೆ.
ಕೋಲ್ಕತ್ತಾದಲ್ಲಿ ಆರ್ ಜಿ ಕರ್ ಆಸ್ಪತ್ರೆಯ ಕಿರಿಯ ವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣ ನಡೆದ ಕೆಲವೇ ವಾರದಲ್ಲಿ ಈ ಹೇಯ ಕೃತ್ಯವೂ ಬಹಿರಂಗವಾಗಿದೆ. ಇಂಡಿಯಾ ಟುಡೆ ವರದಿಯ ಪ್ರಕಾರ, ಮಹಿಳೆ ನೀಡಿದ ದೂರನ್ನು ಆಧರಿಸಿ ಪೊಲೀಸ್ ಅಧಿಕಾರಿಗಳು ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಪಾಲ್ ನ ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿದ್ದು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ನಂತರ ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
Advertisement