RSS ವಿಜಯದಶಮಿ: ಈ ಬಾರಿ ಇಸ್ರೋ ಮಾಜಿ ಮುಖ್ಯಸ್ಥರು ಮುಖ್ಯ ಅತಿಥಿ!

ಅಕ್ಟೋಬರ್ 12 ರಂದು ಬೆಳಿಗ್ಗೆ 7:40 ಕ್ಕೆ ರೇಶಿಂಬಾಗ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆರ್‌ಎಸ್‌ಎಸ್ ತಿಳಿಸಿದೆ.
ಇಸ್ರೋ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್
ಇಸ್ರೋ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್
Updated on

ನಾಗ್ಪುರ: ಅಕ್ಟೋಬರ್ 12 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಾರ್ಷಿಕ 'ವಿಜಯದಶಮಿ' ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಕೆ ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಆರ್ ಎಸ್ ಎಸ್ ಸೋಮವಾರ ಈ ಮಾಹಿತಿ ನೀಡಿದೆ.

ವಿಜಯದಶಮಿ ಉತ್ಸವ ಆರ್‌ಎಸ್‌ಎಸ್ ಕ್ಯಾಲೆಂಡರ್‌ನ ಪ್ರಮುಖ ಘಟನೆಗಳಲ್ಲಿ ಒಂದಾಗಿದ್ದು, ಮೋಹನ್ ಭಾಗವತ್ ಇದನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅಕ್ಟೋಬರ್ 12 ರಂದು ಬೆಳಿಗ್ಗೆ 7:40 ಕ್ಕೆ ರೇಶಿಂಬಾಗ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆರ್‌ಎಸ್‌ಎಸ್ ತಿಳಿಸಿದೆ.

ಇಸ್ರೋ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್
ಕೆಲವು ಧರ್ಮ, ಭಾಷೆ ಮತ್ತು ಸಮುದಾಯಗಳು ಕೀಳು ಎಂದು RSS ಭಾವಿಸುತ್ತದೆ: ರಾಹುಲ್ ಗಾಂಧಿ ಟೀಕೆ

ರಾಷ್ಟ್ರೀಯ ಸ್ವಯಂ ಸೇವಕದ ಸಂಸ್ಥಾಪನಾ ದಿನಾಚರಣೆಯೂ ಆಗಿರುವ ವಾರ್ಷಿಕ ವಿಜಯದಶಮಿ ಉತ್ಸವಕ್ಕೆ ಮಹತ್ವವಿದೆ. ಒಂದು ವರ್ಷದಲ್ಲಿ ದೇಶದಲ್ಲಿ ನಡೆದ ಪ್ರಮುಖ ವಿದ್ಯಮಾನಗಳು ಹಾಗೂ ಸಂಘ ಪರಿವಾರದ ಮುಂದಿನ ಕಾರ್ಯಯೋಜನೆ, ಚಿಂತನೆಯ ಬಗ್ಗೆ ಈ ಉತ್ಸವದಲ್ಲಿ ಇಣುಕುನೋಟ ಇರುತ್ತದೆ. ಸಂಘ ಪರಿವಾರದ ಹಿರಿಯರು ಈ ಬಾರಿಯ ವಿಜಯದಶಮಿ ಉತ್ಸವದ ಮುಖ್ಯ ಅತಿಥಿಯಾಗಿ ಇಸ್ರೋ ಮಾಜಿ ಮುಖ್ಯಸ್ಥರನ್ನು ಆಹ್ವಾನಿಸಿರುವುದು ವಿಶೇಷ ಎನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com