ಅತಿಶಿಯ ಪೋಷಕರು ಅಫ್ಜಲ್ ಗುರುಗೆ ಕ್ಷಮಾದಾನ ಕೋರಿದ್ದರು: ಸ್ವಾತಿ ಮಲಿವಾಲ್ ಆರೋಪ

ಅತಿಶಿಯನ್ನು "ಡಮ್ಮಿ ಸಿಎಂ" ಎಂದು ಕರೆದ ಎಎಪಿ ನಾಯಕಿ, "ದೇವರು ದೆಹಲಿಯನ್ನು ರಕ್ಷಿಸಲಿ" ಎಂದು ಹೇಳಿದ್ದಾರೆ.
ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್
Updated on

ನವದೆಹಲಿ: ದೆಹಲಿ ನಿಯೋಜಿತ ಮುಖ್ಯಮಂತ್ರಿ ಅತಿಶಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು, 2001ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಮರಣದಂಡನೆಯನ್ನು ರದ್ದುಗೊಳಿಸುವಂತೆ ಅವರ ಪೋಷಕರು ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು ಎಂದು ಆರೋಪಿಸಿದ್ದಾರೆ.

ಅತಿಶಿಯನ್ನು "ಡಮ್ಮಿ ಸಿಎಂ" ಎಂದು ಕರೆದ ಎಎಪಿ ನಾಯಕಿ, "ದೇವರು ದೆಹಲಿಯನ್ನು ರಕ್ಷಿಸಲಿ" ಎಂದು ಹೇಳಿದ್ದಾರೆ.

ಒಂದು ಪತ್ರವನ್ನು ಸಹ ಹಂಚಿಕೊಂಡಿರುವ ಮಲಿವಾಲ್ ಅವರು, ಅದು ಅತಿಶಿಯ ಪೋಷಕರು ಬರೆದ ಕ್ಷಮಾದಾನದ ಅರ್ಜಿ ಎಂದು ಹೇಳಿಕೊಂಡಿದ್ದಾರೆ.

"ಇಂದು ದೆಹಲಿಗೆ ಅತ್ಯಂತ ದುಃಖದ ದಿನವಾಗಿದೆ. ಇಂದು, ಮಹಿಳೆಯೊಬ್ಬರು ದೆಹಲಿಯ ಮುಖ್ಯಮಂತ್ರಿಯಾಗುತ್ತಿದ್ದಾರೆ. ಅವರ ಕುಟುಂಬ ಭಯೋತ್ಪಾದಕ ಅಫ್ಜಲ್ ಗುರುವನ್ನು ನೇಣುಗಂಬದಿಂದ ರಕ್ಷಿಸಲು ಸುದೀರ್ಘ ಹೋರಾಟ ನಡೆಸಿತ್ತು. ಆಕೆಯ ಪೋಷಕರು ಭಯೋತ್ಪಾದಕ ಅಫ್ಜಲ್ ಗುರುವನ್ನು ರಕ್ಷಿಸಲು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಅವರ ಪ್ರಕಾರ, ಅಫ್ಜಲ್ ಗುರು ನಿರಪರಾಧಿ ಮತ್ತು ರಾಜಕೀಯ ಷಡ್ಯಂತ್ರದ ಭಾಗವಾಗಿ ಶಿಕ್ಷೆಗೆ ಗುರಿಯಾಗಿದ್ದ" ಎಂದು ಮಲಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಅತಿಶಿ ಮರ್ಲೆನಾ ಕೇವಲ 'ಡಮ್ಮಿ ಸಿಎಂ' ಆಗಿದ್ದರೂ, ಈ ವಿಷಯವು ದೇಶದ ಭದ್ರತೆಗೆ ಸಂಬಂಧಿಸಿದೆ. ದೇವರು ದೆಹಲಿಯನ್ನು ರಕ್ಷಿಸಲಿ!" ಎಂದು ಮಲಿವಾಲ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇಂದು ಬೆಳಗ್ಗೆ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ಶಾಸಕರ ಸಭೆಯಲ್ಲಿ ಅತಿಶಿ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.

ಕೇಜ್ರಿವಾಲ್ ಅವರು ಇಂದು ಸಂಜೆ 4:30ಕ್ಕೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತಿದ್ದು, ನಂತರ ಅತಿಶಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com