
ಲಖನೌ: ಬುಲ್ಡೋಜರ್ ಮೂಲಕ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಅ.1 ವರೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿರುವುದರ ಬಗ್ಗೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.
ಬುಲ್ಡೋಜರ್ ನ್ನು ಗುರುತಾಗಿಸಿಕೊಂಡವರಿಗೆ ಸುಪ್ರೀಂ ಕೋರ್ಟ್ ಆದೇಶದಿಂದ ಗುರುತಿನ ಬಿಕ್ಕಟ್ಟು ಎದುರಾಗಿದೆ ಎಂದು ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
"ಬುಲ್ಡೋಜಿಂಗ್" ಚಿಂತನೆಯನ್ನು ಕೆಡವಲಾಗಿದೆ ಎಂದು ಹೇಳಿರುವ ಅಖಿಲೇಶ್ ಯಾದವ್, ಬುಲ್ಡೋಜರ್ ಹೆಸರನ್ನು ಬದಲಾಯಿಸಬಹುದೇ? ಎಂದು ಕೇಳಿದ್ದಾರೆ.
ಬುಲ್ಡೋಜರ್ ಕ್ರಮದ ಕುರಿತಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದೆ. ಬುಲ್ಡೋಜರ್ ನ್ಯಾಯವನ್ನು ವೈಭವೀಕರಿಸುವುದನ್ನು ನಿಲ್ಲಿಸಬೇಕು. ಅಲ್ಲದೆ ಕಾನೂನು ಪ್ರಕ್ರಿಯೆಯಂತೆ ಮಾತ್ರ ಅತಿಕ್ರಮಣ ತೆಗೆಯಬೇಕು ಎಂದು ಆದೇಶಿಸಿದೆ.
ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಯಾದವ್, ಎಕ್ಸ್ ಪೋಸ್ಟ್‌ನಲ್ಲಿ, ಆದಿತ್ಯನಾಥ್ ಅವರ ಹೆಸರನ್ನು ಉಲ್ಲೇಖಿಸದೆಯೇ ವಾಗ್ದಾಳಿ ನಡೆಸಿದ್ದಾರೆ ಮತ್ತು "ನ್ಯಾಯದ ಸುಪ್ರೀಂ ಆದೇಶವು ಬುಲ್ಡೋಜರ್ ನ್ನು ಮಾತ್ರವಲ್ಲದೆ ಬುಲ್ಡೋಜರ್ ಅನ್ನು ದುರುಪಯೋಗಪಡಿಸಿಕೊಂಡವರ ವಿನಾಶಕಾರಿ ರಾಜಕೀಯವನ್ನೂ ಬದಿಗೊತ್ತಿದೆ" ಎಂದು ಹೇಳಿದ್ದಾರೆ.
Advertisement