ಹೊಸ ಮೂನ್ ಮಿಷನ್ ಚಂದ್ರಯಾನ-4 ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಚಂದ್ರಯಾನ-4 ಮಿಷನ್ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು(2040 ರ ವೇಳೆಗೆ ಯೋಜಿಸಲಾಗಿದೆ) ಮತ್ತು ಸುರಕ್ಷಿತವಾಗಿ ಭೂಮಿಗೆ ಕರೆತರಲು ಮೂಲಭೂತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ.
ಚಂದ್ರಯಾನ 3 ಮಿಷನ್
ಚಂದ್ರಯಾನ 3 ಮಿಷನ್
Updated on

ನವದೆಹಲಿ: ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಿ, ಮತ್ತೆ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರದರ್ಶಿಸಲು ಮೂನ್ ಮಿಷನ್ "ಚಂದ್ರಯಾನ-4"ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಚಂದ್ರಯಾನ-4 ಮಿಷನ್ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು(2040 ರ ವೇಳೆಗೆ ಯೋಜಿಸಲಾಗಿದೆ) ಮತ್ತು ಸುರಕ್ಷಿತವಾಗಿ ಭೂಮಿಗೆ ಕರೆತರಲು ಮೂಲಭೂತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಪ್ರಕಟಣೆಯೊಂದು ತಿಳಿಸಿದೆ.

"ಡಾಕಿಂಗ್ / ಅನ್‌ಡಾಕಿಂಗ್, ಲ್ಯಾಂಡಿಂಗ್ ಸೇರಿದಂತೆ ಭೂಮಿಗೆ ಸುರಕ್ಷಿತವಾಗಿ ಮರಳಲು ಮತ್ತು ಚಂದ್ರನ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆಯನ್ನು ಸಾಧಿಸಲು ಅಗತ್ಯವಿರುವ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುವುದು" ಎಂದು ಅದು ಹೇಳಿದೆ.

ತಂತ್ರಜ್ಞಾನ ಪ್ರದರ್ಶನ ಮಿಷನ್ "ಚಂದ್ರಯಾನ-4" ಗೆ ಒಟ್ಟು 2,104.06 ಕೋಟಿ ರೂಪಾಯಿ ಅವಶ್ಯಕತೆ ಎಂದು ಪ್ರಕಟಣೆ ತಿಳಿಸಿದೆ.

ಚಂದ್ರಯಾನ 3 ಮಿಷನ್
ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2024: ಗಗನ್ಯಾನ್ ಮಾಡ್ಯೂಲ್ ದೃಶ್ಯಗಳು

ಚಂದ್ರಯಾನ- 3 ಯೋಜನೆಯ ಐತಿಹಾಸಿಕ ಯಶಸ್ಸಿನ ಸ್ಫೂರ್ತಿಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಮುಂದಿನ ಚಂದ್ರಯಾನ - 4 ಯೋಜನೆಗೆ ಸಜ್ಜಾಗಿದ್ದು, ಚಂದ್ರಯಾನ -4 ಯೋಜನೆಯಡಿ ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವುದಷ್ಟೇ ಅಲ್ಲದೇ, ಅಲ್ಲಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಭೂಮಿಗೆ ತರುವ ಉದ್ದೇಶ ಹೊಂದಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com