ಜಮ್ಮು-ಕಾಶ್ಮೀರ ಮೊದಲ ಹಂತ ಚುನಾವಣೆ: ಮಧ್ಯಾಹ್ನದವರೆಗೆ ಸುಮಾರು ಶೇ.30ರಷ್ಟು ಮತದಾನ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಬಿಗಿ ಭದ್ರತೆಯ ನಡುವೆ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ಮತದಾನಕ್ಕೆ ನಿಂತಿರುವ ನಾಗರಿಕರು
ಮತದಾನಕ್ಕೆ ನಿಂತಿರುವ ನಾಗರಿಕರು
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (J and K ) ವಿಧಾನಸಭಾ ಚುನಾವಣೆಯಲ್ಲಿ ಇಂದು ಬುಧವಾರದ ಮೊದಲ ಹಂತದ ಮತದಾನದಲ್ಲಿ ಬೆಳಗ್ಗೆ 11 ಗಂಟೆಯವರೆಗೆ 26.72 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕೇಂದ್ರಾಡಳಿತ ಪ್ರದೇಶದ ಏಳು ಜಿಲ್ಲೆಗಳಲ್ಲಿ ಹರಡಿರುವ 24 ಕ್ಷೇತ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಆರ್ಟಿಕಲ್ 370 ರದ್ದಾದ ನಂತರ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.

ಅನಂತನಾಗ್ ಜಿಲ್ಲೆಯಲ್ಲಿ 25.55%

ದೋಡಾ ಜಿಲ್ಲೆಯಲ್ಲಿ 32.30%

ಕಿಶ್ತ್ವಾರ್ ಜಿಲ್ಲೆಯಲ್ಲಿ 32.69%

ಕುಲ್ಗಾಮ್ ಜಿಲ್ಲೆಯಲ್ಲಿ 25.95%

ಪುಲ್ವಾಮಾ ಜಿಲ್ಲೆಯಲ್ಲಿ 20.37%

ರಾಂಬನ್ ಜಿಲ್ಲೆಯಲ್ಲಿ 31.25%

ಶೋಪಿಯಾನ್ ಜಿಲ್ಲೆಯಲ್ಲಿ 25.96% ರಷ್ಟು ಇಲ್ಲಿಯವರೆಗೆ ಮತದಾನವಾಗಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಬಿಗಿ ಭದ್ರತೆಯ ನಡುವೆ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ಮೊದಲ ಹಂತದಲ್ಲಿ, ಕೇಂದ್ರಾಡಳಿತ ಪ್ರದೇಶದಾದ್ಯಂತ 24 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ; ಅದು ಕಾಶ್ಮೀರ ಪ್ರದೇಶದಲ್ಲಿ 16 ಸ್ಥಾನಗಳನ್ನು ಮತ್ತು ಜಮ್ಮು ಪ್ರದೇಶದಲ್ಲಿ 8 ಸ್ಥಾನಗಳನ್ನು ಒಳಗೊಂಡಿದೆ.

ಎರಡನೇ ಮತ್ತು ಮೂರನೇ ಹಂತಗಳಿಗೆ ಕ್ರಮವಾಗಿ ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com