ಜಮ್ಮು-ಕಾಶ್ಮೀರ ಮೊದಲನೇ ಹಂತ ಚುನಾವಣೆ: ಶೇ.61ರಷ್ಟು ಮತದಾನ

ಜಮ್ಮುವಿನ ಚೆನಾಬ್ ಕಣಿವೆ ಪ್ರದೇಶದಲ್ಲಿ ಕಿಶ್ತ್ವಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡಾ 80.14 ರಷ್ಟು ಮತದಾನವಾಗಿದೆ, ನಂತರ ದೋಡಾ (71.34 ಶೇಕಡಾ) ಮತ್ತು ರಂಬಾನ್ (70.55 ಶೇಕಡಾ) ಮತದಾನವಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಜಮ್ಮು-ಕಾಶ್ಮೀರ ಮೊದಲನೇ ಹಂತ ಚುನಾವಣೆ: ಶೇ.61ರಷ್ಟು ಮತದಾನ
Updated on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ 24 ಕ್ಷೇತ್ರಗಳಲ್ಲಿ ನಿನ್ನೆ ಬುಧವಾರ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ.61 ಕ್ಕಿಂತ ಹೆಚ್ಚು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ವರದಿ ಬರುವ ಹೊತ್ತಿಗೆ ಕೆಲವು ಕೇಂದ್ರಗಳ ಮತದಾನ ದತ್ತಾಂಶ ಸಂಗ್ರಹವಾಗಬೇಕಿರುವುದರಿಂದ ಅಂತಿಮ ಮತದಾನದ ಶೇಕಡಾವಾರು ಹೆಚ್ಚಾಗಬಹುದು ಮತ್ತು ಇದು ಅಂಚೆ ಮತಪತ್ರಗಳನ್ನು ಒಳಗೊಂಡಿಲ್ಲ ಎಂದು ಆಯೋಗ ಹೇಳಿದೆ.

ಜಮ್ಮುವಿನ ಚೆನಾಬ್ ಕಣಿವೆ ಪ್ರದೇಶದಲ್ಲಿ ಕಿಶ್ತ್ವಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡಾ 80.14 ರಷ್ಟು ಮತದಾನವಾಗಿದೆ, ನಂತರ ದೋಡಾ (71.34 ಶೇಕಡಾ) ಮತ್ತು ರಂಬಾನ್ (70.55 ಶೇಕಡಾ) ಮತದಾನವಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ದಕ್ಷಿಣ ಕಾಶ್ಮೀರದಲ್ಲಿ, ಕುಲ್ಗಾಮ್ ಜಿಲ್ಲೆ 62.46 ಪ್ರತಿಶತದೊಂದಿಗೆ ಮತದಾನದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಅನಂತನಾಗ್ ಜಿಲ್ಲೆ (57.84 ಪ್ರತಿಶತ), ಶೋಪಿಯಾನ್ ಜಿಲ್ಲೆ (55.96 ಪ್ರತಿಶತ) ಮತ್ತು ಪುಲ್ವಾಮಾ ಜಿಲ್ಲೆ (ಶೇ 46.65) ಎಂದು ಇಸಿ ತಿಳಿಸಿದೆ.

ಆಗಸ್ಟ್ 2019 ರಲ್ಲಿ ಆರ್ಟಿಕಲ್ 370 ರದ್ದತಿ ನಂತರ ಜಮ್ಮು-ಕಾಶ್ಮೀರದಲ್ಲಿ ಇದು ಮೊದಲ ವಿಧಾನಸಭಾ ಚುನಾವಣೆಯಾಗಿದೆ. ಕೊನೆಯ ವಿಧಾನಸಭಾ ಚುನಾವಣೆ 2014 ರಲ್ಲಿ ನಡೆದಿತ್ತು.

ಜಮ್ಮು-ಕಾಶ್ಮೀರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಹಂತ-1 ರಾತ್ರಿ 11:30 ರ ಹೊತ್ತಿಗೆ ಅಂದಾಜು 61.11 ಶೇಕಡಾ ಮತದಾನವನ್ನು ದಾಖಲಾಗಿದೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಿಶ್ತ್ವಾರ್ ಜಿಲ್ಲೆಗಳಲ್ಲಿ, ಅಧಿಕೃತ ಅಂಕಿಅಂಶಗಳ ಪ್ರಕಾರ, ಇಂದರ್ವಾಲ್ ಕ್ಷೇತ್ರವು ಅತಿ ಹೆಚ್ಚು ಶೇಕಡಾ 82.16 ರಷ್ಟು ಮತದಾನವನ್ನು ದಾಖಲಿಸಿದೆ, ನಂತರ ಪಾಡರ್-ನಾಗ್ಸೇನಿ (80.67 ಶೇಕಡಾ) ಮತ್ತು ಕಿಶ್ತ್ವಾರ್ (78.11 ಶೇಕಡಾ).

ಜಮ್ಮು-ಕಾಶ್ಮೀರ ಮೊದಲನೇ ಹಂತ ಚುನಾವಣೆ: ಶೇ.61ರಷ್ಟು ಮತದಾನ
ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಇಳಿಸಿದ ಅಪಹಾಸ್ಯಕ್ಕೆ ಯಾರು ಹೊಣೆ ಎಂದು ಯೋಚಿಸಿ: ಜಮ್ಮು-ಕಾಶ್ಮೀರ ಜನತೆಗೆ ಖರ್ಗೆ ಒತ್ತಾಯ

ಸಮೀಪದ ದೋಡಾ ಜಿಲ್ಲೆಯಲ್ಲಿ, ದೋಡಾ ಪಶ್ಚಿಮ ವಿಭಾಗದಲ್ಲಿ 75.98 ಶೇಕಡಾ, ದೋಡಾ (72.48 ಶೇಕಡಾ) ಮತ್ತು ಭದೆರ್ವಾಹ್ (67.18 ಶೇಕಡಾ) ಮತದಾನವಾಗಿದೆ. ರಾಂಬನ್ ಜಿಲ್ಲೆಯಲ್ಲಿ ಬನಿಹಾಲ್ ಭಾಗದಲ್ಲಿ ಶೇ.71.28 ಮತ್ತು ರಾಂಬನ್ ಶೇ.69.60ರಷ್ಟು ಮತದಾನವಾಗಿದೆ.

ಅನಂತನಾಗ್ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಪಹಲ್ಗಾಮ್‌ನಲ್ಲಿ ಅತಿ ಹೆಚ್ಚು ಮತದಾನವಾಗಿದ್ದು ಶೇ.71.26, ಕೊಕರ್ನಾಗ್ (ಶೇ. 62), ದೂರು (ಶೇ. 61.61), ಶ್ರೀಗುಫ್ವಾರಾ-ಬಿಜ್‌ಬೆಹರಾ (ಶೇ. 60.33), ಶಾಂಗುಸ್-ಅನಂತನಾಗ್ (ಶೇ. 56.72), ಅನಂತನಾಗ್ ಪಶ್ಚಿಮ. (ಶೇ.48.73) ಮತ್ತು ಅನಂತನಾಗ್ ಶೇ.45.62 ರಷ್ಟು ಮತಗಳು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com